ರಾಷ್ಟ್ರೀಯ

ತರಬೇತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ 119 ಐಪಿಎಸ್​ ಅಧಿಕಾರಿಗಳು

Pinterest LinkedIn Tumblr


ಹೈದರಾಬಾದ್: ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (ಎಸ್‌ವಿಪಿಎನ್‌ಪಿಎ) ತರಬೇತಿ ಪಡೆದ 2016ನೇ ಬ್ಯಾಚ್​ನ 122 ಐಪಿಎಸ್ ಅಧಿಕಾರಿಗಳಲ್ಲಿ 119 ಮಂದಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ.

ಈ ಅಧಿಕಾರಿಗಳು ಒಂದು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಆದರೂ ಅವರು ಪ್ರಸ್ತುತ ಪ್ರೊಬೇಷನರಿ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅನುತ್ತೀರ್ಣರಾಗಿರುವ ವಿಷಯಗಳಲ್ಲಿ ಪಾಸ್​ ಆಗಲು ಮೂರು ಅವಕಾಶ ನೀಡಲಾಗಿದೆ. ಮೂರೂ ಅವಕಾಶಗಳಲ್ಲಿ ಐಪಿಎಸ್​ ಅಧಿಕಾರಿಗಳು ಆ ವಿಷಯದಲ್ಲಿ ತೇರ್ಗಡೆಯಾಗದಿದ್ದರೆ ಅವರು ಐಪಿಎಸ್​ ಹುದ್ದೆಯನ್ನು ತ್ಯಜಿಸಬೇಕಾಗುತ್ತದೆ.

2017ರ ಅಕ್ಟೋಬರ್​ನಲ್ಲಿ ನಡೆದ ಪಾಸಿಂಗ್​ ಔಟ್​ ಪರೇಡ್​ನಲ್ಲಿ ಈ ಬ್ಯಾಚ್​ನ ಹಲವು ಅಧಿಕಾರಿಗಳು ಗೃಹ ಸಚಿವರಿಂದ ಪದಕಗಳನ್ನೂ ಸಹ ಪಡೆದಿದ್ದರು. ಅವರೂ ಸಹ ಪರೀಕ್ಷೆಯಲ್ಲಿ ಪಾಸ್​ ಆಗಿಲ್ಲ.

ತರಬೇತಿ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ವಿಫಲರಾಗುವುದು ಸಾಮಾನ್ಯ. ಆದರೆ 2016ರ ಬ್ಯಾಚ್​ ಪರೀಕ್ಷೆಯಲ್ಲಿ ಶೇ. 90 ರಷ್ಟು ಮಂದು ಅನುತ್ತೀರ್ಣರಾಗಿದ್ದು ಮಾತ್ರ ಆಶ್ಚರ್ಯಕರ ಸಂಗತಿ. ಅಕಾಡೆಮಿಯ ಇತಿಹಾಸದಲ್ಲಿ ಇಂತಹ ಫಲಿತಾಂಶ ಬಂದಿರಲಿಲ್ಲ. ಎರಡನೇ ಹಂತದ ಪರೀಕ್ಷೆಯಲ್ಲಿ ವಿಫಲರಾದ 119 ಅಧಿಕಾರಿಗಳು ಮತ್ತೆ ಪರೀಕ್ಷೆ ಎದುರಿಸಬೇಕು ಎಂದು ಅಕಾಡೆಮಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.