ರಾಷ್ಟ್ರೀಯ

ಸ್ಮಾರ್ಟ್‌ಫೋನ್‌ಗಳಿಂದ ಮಹಿಳಾ ದೌರ್ಜನ್ಯದಲ್ಲಿ ಏರಿಕೆ: ಬಿಜೆಪಿ ಸಂಸದ ನಂದ ಕುಮಾರ್ ಸಿಂಗ್ ಚೌಹಾನ್

Pinterest LinkedIn Tumblr


ಭೋಪಾಲ್: ಪ್ರಚೋದನಾತ್ಮಕವಾದ ಅಂತರ್ಜಾಲ ತಾಣಗಳು ಮತ್ತು ಸ್ಮಾರ್ಟ್‌ಫೋನ್‌ಗಳೇ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಲು ಕಾರಣ ಎಂದು ಮಧ್ಯಪ್ರದೇಶದ ಖಂಡವಾದ ಬಿಜೆಪಿ ಸಂಸದ ನಂದ ಕುಮಾರ್ ಸಿಂಗ್ ಚೌಹಾನ್ ಹೇಳಿದ್ದಾರೆ.

ದಾಮೋಹ್‌ದಲ್ಲಿ ಸುದ್ದಿಗಾರರೊಂದಿಗೆ ಮಾತನ್ನಾಡುತ್ತಿದ್ದ ಅವರು, ಅಂತರ್ಜಾಲ, ಸ್ಮಾರ್ಟ್‌ಫೋನ್‌ಗಳು ಯುವಜನಾಂಗದ ಕೈಗೆ ಸುಲಭವಾಗಿ ಎಟಕುತ್ತಿದ್ದು, ಅಶ್ಲೀಲ ಚಿತ್ರ, ವಿಡಿಯೋಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಎಳೆಯ ಮನಸ್ಸುಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿ ವಿಕೃತಿಗೆ ದಾರಿ ಮಾಡಿಕೊಡುತ್ತದೆ, ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

8 ವರ್ಷದ ಮಗುವಿನ ಮೇಲೆ ನಡೆದ ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಕೈವಾಡವಿದೆ, ಎಂದು ಹೇಳುವ ಮೂಲಕ ಚೌಹಾನ್ ಈ ಹಿಂದೆ ವಿವಾದ ಸೃಷ್ಟಿಸಿದ್ದರು.

Comments are closed.