ರಾಷ್ಟ್ರೀಯ

ಅಪಹರಿಸಿದ್ದ ಕಾನ್ಸ್​ಟೇಬಲ್​ ಜಾವೆದ್​ರನ್ನು ಹತ್ಯೆಗೈದ ಉಗ್ರರು !

Pinterest LinkedIn Tumblr

ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಶೋಪಿಯಾನ್​ನ ಕಚ್​ಡೂರಾ ಎಂಬ ಹಳ್ಳಿಯಿಂದ ಅಪಹರಿಸಲಾಗಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಜಾವೆದ್​ ಮೃತದೇಹ ಡಾಂಗ್ರಾ ಶೋಪಿಯಾನ್​ನಲ್ಲಿ ಪತ್ತೆಯಾಗಿದೆ. ಜಾವೆದ್​ರ ಹಣೆಗೆ ಗುಂಡೇಟು ತಗುಲಿದ್ದು, ಲಭ್ಯವಾದ ಮಾಹಿತಿ ಅನ್ವಯ ಕಾನ್ಸ್​ಟೇಬಲ್ ಜಾವೆದ್ ಔಷಧಿ ತರಲು ಮೆಡಿಕಲ್​ ಶಾಪ್​ಗೆ ತೆರಳಿದ್ದ ಸಂದರ್ಭದಲ್ಲಿ ಉಗ್ರರು ಆವರನ್ನು ಅಪಹರಣ ಮಾಡಿದ್ದರೆಂದು ತಿಳಿದು ಬಂದಿದೆ. ಗುರುವಾರ ರಾತ್ರಿಯಿಂದಲೇ ನಾಪತ್ತೆಯಾದ ಜಾವೆದ್​ಗಾಗಿ ಹುಡುಕಾಟ ಆರಂಭವಾಗಿತ್ತೆನ್ನಲಾಗಿದೆ. ಇನ್ನು ಈ ದುಷ್ಕೃತ್ಯದ ಹಿಂದೆ ಹಿಜ್ಬುಲ್​ ಉಗ್ರ ಸಂಘಟನೆಯ ಕೈವಾಡ ಇದೆ ಎಂದು ಹೇಳಲಾಗುತ್ತಿದೆ.

ಜಮ್ಮು ಕಾಶ್ಮೀರದ ಕಚ್​ಡೂರಾ ಹಳ್ಳಿಯಿಂದ ಗುರುವಾರ ರಾತ್ರಿ ಕಾರಿನಲ್ಲಿ ಬಂದಿದ್ದ ಮೂವರು ಉಗ್ರರು ಪೊಲೀಸ್​ ಕಾನ್ಸ್​ಟೇಬಲ್​ ಜಾವೆದ್ ಅಹಮದ್​ ಡಾರ್​ರನ್ನು ಅಪಹರಿಸಿದ್ದರು. ಜಾವೆದ್​ ಮಾಜಿ ಸೂಪರಿಟೆಂಡೆಂಟ್​ ಆರ್ಫ ಪೊಲೀಸ್​ ಆಗಿದ್ದ ಶಾಲಿಂದರ್​ ಮಿಶ್ರಾರವರ ಪರ್ಸನಲ್​ ಬಾಡಿ ಗಾರ್ಡ್​ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಈವರೆಗೆ ಲಭ್ಯವಾದ ಮಾಹಿತಿ ಅನ್ವಯ ಕಾರಿನಲ್ಲಿ ಬಂದಿದ್ದ ಉಗ್ರರು ಅವರ ಮನೆಯ ಆಸುಪಾಸಿನಲ್ಲಿ ಹಲವಾರು ಬಾರಿ ಸುತ್ತಾಡಿರುವುದು ಕಂಡು ಬಂದಿದೆ. ಹೀಗಿರುವ ಜಾವೆದ್​ ಔಷಧಿ ತರಲೆಂದು ಮೆಡಿಕಲ್​ ಶಾಪ್​ಗೆ ತೆರಳಿದ್ದು, ಈ ಸಂದರ್ಭದಲ್ಲಿ ಉಗ್ರರು ಅವರನ್ನು ಅಹರಣ ಮಾಡಿದ್ದರೆನ್ನಲಾಗಿದೆ.

ಸರಿ ಸುಮಾರು ಒಂದು ತಿಂಗಳ ಹಿಂದಷ್ಟೇ ಸೇನಾ ಯೋಧ ರೈಫಲ್​ಮ್ಯಾನ್​ ಔರಂಗಜೇಬ್​ ಎಂವರು ಈದ್​ ಹಬ್ಬದ ಆಚರಣೆಗಾಗಿ ರಜೆ ಪಡೆದು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಉಗ್ರರು ಅವರನ್ನು ಅಪಹರಿಸಿದ್ದರು. ಇದಾದ ಮರುದಿನವೇ ಗುಂಡೇಟುಗಳಿಂದ ರಕ್ತಸಿಕ್ತವಾಗಿದ್ದ ಅವರ ಮೃತದೇಹ ಪತ್ತೆಯಾಗಿತ್ತು.

ಕಳೆದ ವರ್ಷ ಕೂಡಾ ಸೇನಾ ಯೋಧ ಉಮರ್​ ಫಯಾಜ್​ ಎಂಬವರನ್ನು ಅಪಹರಿಸಿದ್ದ ಉಗ್ರರು ಹತ್ಯೆಗೈದಿದ್ದರು. ಅವರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಿಡ್ನ್ಯಾಪ್​ ಮಾಡಲಾಗಿತ್ತು.

Comments are closed.