ರಾಷ್ಟ್ರೀಯ

ಬಿಷಪ್‌ರಿಂದ ಅನೈಸರ್ಗಿಕ ಸೆಕ್ಸ್‌ ಹೇಳಿಕೆ; ಕ್ರೈಸ್ತ ಸನ್ಯಾಸಿನಿಯಿಂದ ದಾಖಲು

Pinterest LinkedIn Tumblr

ಕೋಟ್ಟಯಂ, ಕೇರಳ : ಜಾಲಂಧರ್‌ನಲ್ಲಿನ ರೋಮನ್‌ ಕ್ಯಾಥೋಲಿಕ್‌ ಚರ್ಚಿನ ಬಿಷಪ್‌ ಓರ್ವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ತನ್ನ ಮೇಲೆ ಅನೈಸರ್ಗಿಕ ಸೆಕ್ಸ್‌ ನಡೆಸಿದರೆಂದು ಆರೋಪಿಸಿರುವ ನನ್‌ (ಕ್ರೈಸ್ತ ಸನ್ಯಾಸಿನಿ) ಅವರ ಹೇಳಿಕೆಯನ್ನು ಇಲ್ಲಿಗೆ ಸಮೀಪದ ಚಂಗನಶೆರಿ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟರ ನ್ಯಾಯಾಲಯ ದಾಖಲಿಸಿಕೊಂಡಿದೆ.

ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರ ತಂಡವು ಸಂತ್ರಸ್ತೆ, ಕ್ರೈಸ್ತ ಸನ್ಯಾಸಿನಿಯ ಹೇಳಿಕೆಯನ್ನು ಸಿಆರ್‌ಪಿಸಿ ಸೆ.164ರ ಪ್ರಕಾರ ದಾಖಲಿಸಿಕೊಳ್ಳುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ನಿನ್ನೆ ಗುರುವಾರ ಮಧ್ಯಾಹ್ನ 2 ಗಂಟೆಗೆ ಕೋರ್ಟ್‌ ತಲುಪಿನ ನನ್‌, ಹೇಳಿಕೆ ದಾಖಲೀಕರಣ ಪ್ರಕ್ರಿಯೆ ಮುಗಿಸಿ ರಾತ್ರಿ 8.30ಕ್ಕೆ ಮರಳಿದರೆಂದು ಮೂಲಗಳು ತಿಳಿಸಿವೆ.

Comments are closed.