ರಾಷ್ಟ್ರೀಯ

ಶಾಲಾ ಬಾಲಕನ ಬ್ಯಾಗ್ ನಲ್ಲಿದ್ದ ನಾಗರಹಾವು ಕಂಡು ಬೆಚ್ಚಿ ಬಿದ್ದ ವಿದ್ಯಾರ್ಥಿಗಳು

Pinterest LinkedIn Tumblr

ಕೃಷ್ಣಗಿರಿ (ತಮಿಳುನಾಡು): ಶಾಲಾ ಬಾಲಕನ ಬ್ಯಾಗ್ ನಲ್ಲಿ ಪುಸ್ತಕ, ಪೆನ್ಸಿಲ್ ಇನ್ನಿತರೆ ಕಲಿಕಾ ಸಾಮಗ್ರಿಗಳಿರುವುದು ಸಾಮಾನ್ಯ. ಆದರೆ ಬಾಲಕನೊಬ್ಬನ ಶಾಲಾ ಬ್ಯಾಗ್ ನಲ್ಲಿ ಪುಸ್ತಕಗಳ ನಡುವ ನಾಗರ ಹಾವು ಪತ್ತೆಯಾಗಿರುವ ಘಟನೆ ತಮಿಳುನಾಡು ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.

ಕೃಷ್ಣಗಿರಿ ಜಿಲ್ಲೆ ಕಾಮರಾಜನಗರ ಟೌನ್ ನ ಸರ್ಕಾರಿ ಶಾಲೆಗೆ ತೆರಳಿದ್ದ ಬಾಲಕನ ಬ್ಯಾಗ್ ನಲ್ಲಿ ನಾಗರ ಹಾವು ಪತ್ತೆಯಾಗಿದೆ. ಶಾಲೆಗೆ ತೆರಳಿ ತನ್ನ ಬ್ಯಾಗ್ ತೆರೆಯುತ್ತಿದ್ದಂತೆಯೇ ಪುಸ್ತಕಗಳ ನಡುವೆ ಇದ್ದ ಹಾವು ಕಂಡು ಬಾಲಕ ಸೇರಿ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ.

ಅದೃಷ್ಟವಶಾತ್ ಸುಮಾರು ಒಂದು ಕಿಮೀ ವರೆಗೆ ಬ್ಯಾಗ್ ಹೊತ್ತಿದ್ದ ಬಾಲಕನಿಗೆ ಹಾವು ಯಾವ ಅಪಾಯವನ್ನು ಮಾಡಲಿಲ್ಲ.ಹಾಗೆಯೇ ಶಾಲೆಯ ಇತರೆ ಮಕ್ಕಳಿಗೆ, ಶಿಕ್ಃಸ್ಕರಿಗೆ ಸಹ ಯಾವ ಅಪಾಯವಾಗಿಲ್ಲ.

ಬಾಲಕ ಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಶುಕ್ರವಾರ ಸಂಜೆ ಶಾಲೆಯಿಂದ ಸುಮಾರು 90 ಕಿಮೀ ದೂರದ ತನ್ನೂರಿಗೆ ತೆರಳಿದ್ದಾನೆ.ಮನೆಗೆ ಹೋದ ಬಾಲಕ ಬ್ಯಾಗನ್ನು ಒಂದು ಮೂಲೆಯಲ್ಲಿಟ್ಟಿದ್ದಾನೆ. ಸೋಮವಾರ ಶಾಲೆಗೆ ತೆರಳುವವರೆಗೆ ಬ್ಯಾಗ್ ಮುತ್ಟಿಲ್ಲ. ಈ ನಡುವೆ ಮನೆಗೆ ಪ್ರವೇಶಿಸಿದ್ದ ನಾಗರಹಾವು ಅವನ ಬ್ಯಾಗೊಳಗೆ ಸೇರಿಕೊಂಡಿರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಸಧ್ಯ ಶಾಲೆಯಲ್ಲಿ ಪತ್ತೆಯಾದ ಹಾವನ್ನು ಶಿಕ್ಷಕರು ಸುರಕ್ಷಿತವಾಗಿ ಸಮೀಪದ ಕೆರೆಗೆ ಬಿಟ್ಟಿದ್ದಾರೆ.

Comments are closed.