ರಾಷ್ಟ್ರೀಯ

ನನ್ನ ವಿರುದ್ಧದ ಅನ್ಯಾಯದ ವಿಚಾರಣೆಯಿಂದ ಸುರಕ್ಷಿತವಾಗುವವರೆಗೆ ಭಾರತಕ್ಕೆ ಬರುವುದಿಲ್ಲ: ಝಾಕಿರ್ ನಾಯಕ್

Pinterest LinkedIn Tumblr

ನವದೆಹಲಿ: ನನ್ನ ವಿರುದ್ಧದ ಅನ್ಯಾಯದ ವಿಚಾರಣೆಯಿಂದ ಸುರಕ್ಷಿತವಾಗುವವರೆಗೆ ನಾನು ಭಾರತಕ್ಕೆ ಬರುವುದಿಲ್ಲ ಎಂದು ಭಾರತಕ್ಕೆ ಬೇಕಾಗಿರುವ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯಕ್ ಅವರು ಬುಧವಾರ ಹೇಳಿದ್ದಾರೆ.

‘ನಾನು ಭಾರತಕ್ಕೆ ಬರುತ್ತೇನೆ ಎಂಬ ಮಾಧ್ಯಮ ವರದಿ ಸಂಪೂರ್ಣ ಆಧಾರ ರಹಿತ ಮತ್ತು ಸುಳ್ಳು ಸುದ್ದಿ. ನನ್ನ ವಿರುದ್ಧದ ಅನ್ಯಾಯದ ವಿಚಾರಣೆಯಿಂದ ನಾನು ಸುರಕ್ಷಿತವಾಗುವವರೆಗೆ ಭಾರತಕ್ಕೆ ಬರುವ ಯಾವುದೇ ಯೋಚನೆ ಇಲ್ಲ’ ಎಂದು ಝಾಕಿರ್ ನಾಯಕ್ ತಿಳಿಸಿದ್ದಾರೆ.

ಸರ್ಕಾರ ನನಗೆ ಏನು ಮಾಡುವುದಿಲ್ಲ. ನ್ಯಾಯೋಚಿತವಾಗಿದೆ ಎಂದು ನಾನು ಭಾವಿಸಿದಾಗ ಖಂಡಿತ ತಾಯಿ ನಾಡಿಗೆ ಮರಳುತ್ತೇನೆ ಝಾಕಿರ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದ್ಯ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ಮುಂದೆ ವಿಚಾರಣೆಗೆ ಹಾಜರಾಗಲು ವಿಫಲವಾಗಿದ್ದು, ಆರೋಪಿಯ ಪಾಸ್ ಪೋರ್ಟ್ ಅನ್ನು ರದ್ದುಗೊಳಿಸಲಾಗಿದೆ.

ಕೋಮುವಾದ ಮತ್ತು ಭಯೋತ್ಪಾದನೆ ಪ್ರಚೋದಕ ಭಾಷಣ ಹಾಗೂ ಹಣಕಾಸು ನೆರವು ನೀಡಿದ ಆರೋಪದ ಮೇಲೆ ನವೆಂಬರ್ 18, 2016ರಂದು ಝಾಕಿರ್ ನಾಯಕ್ ವಿರುದ್ಧ ಎನ್ ಐಎ ಕ್ರಿಮಿನಲ್ ಕೇಸ್ ದಾಖಲಿಸಿತ್ತು.

ಇನ್ನು ನಾಯಕ್‌ ಒಡೆತನದ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌ (ಐಆರ್‌ಎಫ್‌) ಸಂಸ್ಥೆಯನ್ನು ಕಾನೂನುಬಾಹಿರ ಚಟುವಟಿಕೆ ಕಾಯ್ದೆ ಅಡಿ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

Comments are closed.