ರಾಷ್ಟ್ರೀಯ

ನಿತೀಶ್‌ ಕುಮಾರ್ ವಿರುದ್ಧ ಎಫ್ಐಆರ್‌: ಲಾಲು ಪುತ್ರ ಗುಡುಗು

Pinterest LinkedIn Tumblr


ಪಟ್ನಾ : ತನ್ನ ತಾಯಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಗುರಿ ಇರಿಸಿ ಹಾಕಲಾಗಿರುವ ಪೋಸ್ಟ್‌ ಮೂಲಕ ತನ್ನ ಫೇಸ್‌ ಬುಕ್‌ ಖಾತೆಯನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಹ್ಯಾಕ್‌ ಮಾಡಿದ್ದಾರೆ ಎಂದು ಆರೋಪಿಸಿದ ಕೆಲವೇ ತಾಸುಗಳ ಬಳಿಕ ಲಾಲು ಪುತ್ರ, ಆರ್‌ಜೆಡಿ ಮುಖ್ಯಸ್ಥ ತೇಜ್‌ ಪ್ರತಾಪ್‌ ಯಾದವ್‌ ಅವರು “ಈ ಬಗ್ಗೆ ನಾನು ಸಿಎಂ ನಿತೀಶ್‌ ಚಾಚಾ ವಿರುದ್ಧ ಎಫ್ಐಆರ್‌ ದಾಖಲಿಸುವೆ’ ಎಂದು ಗುಡುಗಿದ್ದಾರೆ.

ಬಿಹಾರದ ಮಹಾ ಘಟಬಂಧನಕ್ಕೆ ಮರಳಲು ಬಯಸಿರುವ ಸಿಎಂ ನಿತೀಶ್‌ ಕುಮಾರ್‌ ಅವರಿಗೆ ಮೈತ್ರಿ ಕೂಟದ ಬಾಗಿಲು ಮುಚ್ಚಿರುವ ರೀತಿಯಲ್ಲೇ ತಾನು ತನ್ನ ತಾಯಿಯ ನಿವಾಸದ ಮುಂದೆ ನೀತೀಶ್‌ ಕುಮಾರ್‌ ಅವರಿಗೆ “ನೋ ಎಂಟ್ರಿ’ ಬೋರ್ಡ್‌ ಹಾಕಿಸುತ್ತೇನೆ ಎಂದು ಎರಡು ದಿನಗಳ ಹಿಂದಷ್ಟೇ ತೇಜ್‌ ಪ್ರತಾಪ್‌ ಹೇಳಿದ್ದರು.

ಅದಾದ ಒಂದು ದಿನದ ತರುವಾಯ ತೇಜ್‌ ಪ್ರತಾಪ್‌ ಯಾದವ್‌ “ನನ್ನ ಫೇಸ್‌ ಬುಕ್‌ ಖಾತೆಯನ್ನು ಬಿಜೆಪಿ, ಆರ್‌ಎಸ್‌ಎಸ್‌ ನವರು ಹ್ಯಾಕ್‌ ಮಾಡಿದ್ದಾರೆ. ನನ್ನ ಹೆಚ್ಚುತ್ತಿರುವ ಜನಪ್ರಿಯತೆಯೇ ಇದಕ್ಕೆ ಕಾರಣವಾಗಿದೆ. ಇದನ್ನು ತಡೆಯುವ ಸಲುವಾಗಿ ನಿತೀಶ್‌ ಚಾಚಾ ಮತ್ತು ಸುಶೀಲ್‌ ಮೋದಿ ಚಾಚಾ ಅವರು ನನ್ನ ಫೇಸ್‌ ಬುಕ್‌ ಖಾತೆಯನ್ನು ಹ್ಯಾಕ್‌ ಮಾಡಿದ್ದಾರೆ.ಆದುದರಿಂದ ನಾನು ಅವರ ವಿರುದ್ದ ಎಫ್ಐಆರ್‌ ದಾಖಲಿಸುವೆ ಎಂದು ತೇಜ್‌ ಪ್ರತಾಪ್‌ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.

“ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ; ನಾವು ಒಗ್ಗಟ್ಟಿನಿಂದ ಇದ್ದೇವೆ. 2019ರ ಚುನಾವಣೆಗಳಲ್ಲಿ ನಾವು ಬಿಜೆಪಿ – ಆರ್‌ಎಸ್‌ ಎಸ್‌ ಅನ್ನು ಸೋಲಿಸುತ್ತೇವೆ. ನನ್ನ ಫೇಸ್‌ ಬುಕ್‌ ಖಾತೆಯನ್ನು ಬಿಜೆಪಿ – ಆರ್‌ಎಸ್‌ಎಸ್‌ ನವರು ಹ್ಯಾಕ್‌ ಮಾಡಿದ್ದಾರೆ’ ಎಂದು ತೇಜ್‌ ಪ್ರತಾಪ್‌ ಯಾದವ್‌ ಹೇಳಿದರು.

Comments are closed.