ರಾಷ್ಟ್ರೀಯ

‘ರೈಸಿಂಗ್ ಕಾಶ್ಮೀರ್‌’ ದಿನಪತ್ರಿಕೆಯ ಸಂಪಾದಕ ಶುಜಾತ್‌ ಬುಖಾರಿ ಹತ್ಯೆ: ನಾಲ್ವರು ಆರೋಪಿಗಳ ರೇಖಾಚಿತ್ರ ಬಿಡುಗಡೆ

Pinterest LinkedIn Tumblr


ಶ್ರೀನಗರ: ‘ರೈಸಿಂಗ್ ಕಾಶ್ಮೀರ್‌’ ದಿನಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹತ್ಯೆ ಆರೋಪಿಗಳ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಈ ಹತ್ಯೆ ಸಂಚು ರೂಪಿಸಲಾಗಿದೆ. ಲಷ್ಕರೆ ತಯ್ಬಾ ಉಗ್ರ ಸಂಘಟನೆಯೇ ಇದಕ್ಕೆ ಪ್ರಮುಖ ಹೊಣೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಎಸ್ ಪಿ ಪಣಿ ಸುದ್ದಿ ಗಾರರಿಗೆ ಮಾಹಿತಿ ನೀಡಿದ್ದಾರೆ.

ತನಿಖೆಯ ವೇಳೆ ಬುಖಾರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳ ಗುರುತು ಪತ್ತೆ ಮಾಡಿದ್ದು, ಪಾಕಿಸ್ತಾನ ಮೂಲಕ ಎಲ್ ಇಟಿ ಉಗ್ರ ಸಾಜದ್ ಗುಲ್, ಶುಜಾತ್ ಬುಖಾರಿ ವಿರುದ್ಧ ಬ್ಲಾಗ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷದ ಪ್ರಚಾರ ನಡೆಸಿದ್ದ ಎಂದು ಪಣಿ ತಿಳಿಸಿದ್ದಾರೆ.

ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್‌ ಆಫ್‌ ಇಂಡಿಯಾ ಈ ಹಿಂದೆ ವರದಿ ಮಾಡಿದಂತೆ ಈ ಹತ್ಯೆಯ ಪ್ರಮುಖ ರೂವಾರಿ ಸಾಜದ್ ಗುಲ್‌ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಜದ್‌ ಗುಲ್ ಸದ್ಯ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಜೂನ್ 14ರಂದು ಇಲ್ಲಿನ ಪ್ರೆಸ್‌ ಕಾಲೊನಿಯಲ್ಲಿ ಆಂಗ್ಲ ದೈನಿಕದ ಸಂಪಾದಕ ಶುಜಾತ್‌ ಬುಖಾರಿ ಹಾಗೂ ಅವರ ಇಬ್ಬರು ಖಾಸಗಿ ಭದ್ರತಾ ಅಧಿಕಾರಿಗಳನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

Comments are closed.