ರಾಷ್ಟ್ರೀಯ

ಹಬ್ಬವಿರಲಿ ಅಥವಾ ಬೇರೆ ಸಂದರ್ಭದಲ್ಲೇ ಆಗಲಿ ವಿರುದ್ಧ ಲಿಂಗಿಗಳ ಆಲಿಂಗನ ಇಸ್ಲಾಂನಲ್ಲಿ ನಿಷಿದ್ಧ: ಇಮಾಮ್‌

Pinterest LinkedIn Tumblr


ಮೊರದಾಬಾದ್‌: ಹಬ್ಬವಿರಲಿ ಅಥವಾ ಬೇರೆ ಸಂದರ್ಭದಲ್ಲೇ ಆಗಲಿ ಅಪರಿಚಿತ ಪುರುಷರನ್ನು ಮಹಿಳೆಯರು ಅಪ್ಪಿಕೊಳ್ಳುವುದು ಇಲ್ಲವೇ ಸ್ಪರ್ಶಿಸುವುದು ಇಸ್ಲಾಂ ಸಮಾಜದಲ್ಲಿ ನಿಷಿದ್ಧ ಎಂದು ಉತ್ತರಪ್ರದೇಶದ ಮೊರದಾಬಾದ್‌ ಜಿಲ್ಲೆಯ ಇಮಾಮ್‌ ಹೇಳಿದ್ದಾರೆ.

ಇತ್ತೀಚೆಗೆ ಈದ್‌ ಹಬ್ಬದ ಹಿಂದಿನ ದಿನ ಶಾಪಿಂಗ್‌ ಮಾಲ್‌ವೊಂದರ ಎದುರು ಅಪರಿಚಿತ ಯುವತಿಯೊಬ್ಬಳು ಯುವಕರನ್ನು ಅಪ್ಪಿಕೊಳ್ಳುತ್ತಿದ್ದ ಮತ್ತು ಅದಕ್ಕಾಗಿ ಹುಡುಗರು ಕ್ಯೂ ನಿಂತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ವಿವಾದಕ್ಕೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಇಮಾಮ್‌ ಈ ಹೇಳಿಕೆ ನೀಡಿದ್ದಾರೆ.

‘ಆ ಹುಡುಗಿ ನನ್ನ ಮಗಳಂತಿದ್ದಾಳೆ. ನಾನು ಆ ಹುಡುಗಿಯ ಜತೆ ಮಾತನಾಡಿದ್ದು, ಹುಡುಗರನ್ನು ಅಪ್ಪಿಕೊಳ್ಳುವುದು ಇಸ್ಲಾಂ ಮತ್ತು ಶರೀಯತ್‌ಗೆ ವಿರೋಧ. ತಂದೆ, ಸೋದರ, ಸಂಗಾತಿಯನ್ನು ಮಾತ್ರವೇ ಅಪ್ಪಿಕೊಳ್ಳುವುದಕ್ಕೆ ಇಸ್ಲಾಂನಲ್ಲಿ ಅವಕಾಶವಿದೆ. ಇದೇ ಕಾನೂನು ಹುಡುಗರಿಗೂ ಅನ್ವಯಿಸುತ್ತದೆ, ‘ಎಂದು ತಿಳಿಸಿ ಹೇಳಿರುವುದಾಗಿ ಜಿಲ್ಲಾ ಇಮಾಮ್‌ ಮುಫ್ತಿ ಮೊಹಮ್ಮದ್‌ ಅಶ್ರಫಿ ಹೇಳಿದ್ದಾರೆ.

ಹೀಗೆ ಹಗ್‌ ಮಾಡಿರುವುದಕ್ಕೆ ಟೀಕೆ ವ್ಯಕ್ತವಾದ ಬಳಿಕ ಆ ಯುವತಿ ಸಾಮಾಜಿಕ ಮಾಧ್ಯಮಗಳ ಮೂಲಕ ಕ್ಷಮೆ ಕೂಡ ಯಾಚಿಸಿದ್ದಾರೆ. ಆ ಹುಡುಗಿಯನ್ನು ಅಪ್ಪಿಕೊಂಡಿರುವ ಎಲ್ಲ ಹುಡುಗರು ಕೂಡ ಶರೀಯತ್‌ ಉಲ್ಲಂಘಿಸಿದ್ದಾರೆ ಎಂದು ಇಮಾಮ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments are closed.