ರಾಷ್ಟ್ರೀಯ

ಭದ್ರತಾ ಪಡೆಯಿಂದ 21 ಉಗ್ರರ ಹಿಟ್‌ ಲಿಸ್ಟ್‌ ಸಿದ್ಧ!

Pinterest LinkedIn Tumblr


ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಅಂತ್ಯಗೊಂಡ ಬೆನ್ನಲ್ಲೇ ಉಗ್ರ ನಿಗ್ರಹ ಚಟುವಟಿಕೆ ಆರಂಭವಾಗಿದೆ.

ಈ ಹಿಂದೆ ಹಲವಾರು ತೊಡಕುಗಳ ಕಾರಣದಿಂದಾಗಿ ಉಗ್ರ ನಿಗ್ರಹ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು. ಈಗ ಕೇಂದ್ರ ಸರಕಾರ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ.

ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಎನ್‌ಎಸ್‌ಜಿ ಕಮಾಂಡೊಗಳನ್ನು ಜಮ್ಮು ಕಾಶ್ಮೀರದಲ್ಲಿ ನಿಯೋಜಿಸಲಾಗಿದೆ. ಈ ಎಲ್ಲದರ ನಡುವೆ ಭದ್ರತಾ ಪಡೆಗಳು ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ.

ಈ ಮೊದಲು ಉಗ್ರರು ಗಣ್ಯರ ಹಿಟ್‌ ಲಿಸ್ಟ್‌ ರೆಡಿ ಮಾಡುತ್ತಿದ್ದರು, ಆದರೆ ಈಗ ಭದ್ರತಾ ಪಡೆಗಳೇ 21 ಉಗ್ರರ ಹಿಟ್‌ ಲಿಸ್ಟ್‌ ರೆಡಿ ಮಾಡಿದೆ.

ವಿಧ್ವಂಸಕ ಕೃತ್ಯಗಳಿಗೆ, ಸಮಾಜ ವಿದ್ರೋಹಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದ 21 ಉಗ್ರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇವರ ವಿರುದ್ಧ ಕಾರ್ಯಾಚರಣೆ ನಡೆಸಲು ಸ್ಕೆಚ್‌ ರೂಪಿಸಲಾಗಿದೆ.

ಈಗಾಗಲೇ ಜಮ್ಮು ಕಾಶ್ಮೀರದ ಐಸಿಸ್‌ ಮುಖ್ಯಸ್ಥ ಸೇನಾ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ. ಇವನಂತೆ ಇನ್ನೂ 20ಕ್ಕೂ ಹೆಚ್ಚು ಉಗ್ರರು ಇದ್ದಾರೆ.

21 ಉಗ್ರರ ಪೈಕಿ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ 11, ಲಷ್ಕರೆ ತಯ್ಬಾದ 7, ಜೈಷೆ ಮೊಹಮ್ಮದ್‌ನ 2 ಹಾಗೂ ಅನ್ಸಾಫ್‌ ಗಝಾವಾತ್‌ ಉಲ್‌ ಹಿಂದ್‌ ಸಂಘಟನೆ ಒಬ್ಬ ಉಗ್ರನನ್ನು ಸೇನಾ ಪಡೆಗಳು ಪಟ್ಟಿ ಮಾಡಿದೆ.

ಈ ಉಗ್ರರ ಚಲನವಲನ ಮೇಲೆ ನಿಗಾ ಇರಿಸಿ ಇವರ ನೆಲೆಗಳನ್ನು ಹಾಗೂ ಜಾಲವನ್ನು ಸಂಪೂರ್ಣ ನಾಶಪಡಿಸಲು ಸೇನಾ ಯೋಧರು ಯೋಜನೆ ರೂಪಿಸಿದ್ದಾರೆ.

ಈ ಉಗ್ರರ ಕುರಿತು ಮಾಹಿತಿ ನೀಡುವವರಿಗೆ 10 ಲಕ್ಷಕ್ಕೂ ಹೆಚ್ಚು ಮೊತ್ತದ ಬಹುಮಾನವನ್ನೂ ಘೋಷಿಸಲಾಗಿದೆ.

ಒಟ್ಟಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಈಗ ಉಗ್ರ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ಚುರುಕು ಪಡೆದುಕೊಂಡಂತಾಗಿದೆ.

Comments are closed.