ರಾಷ್ಟ್ರೀಯ

ದಿಲ್ಲಿ ವಿವಿಯ ಸೀಟು ಗಿಟ್ಟಿಸಿದ ತೆಲಂಗಾಣದ ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳು

Pinterest LinkedIn Tumblr


ಹೊಸದಿಲ್ಲಿ : ತೆಲಂಗಾಣದ ಸಮಾಜ ಕಲ್ಯಾಣ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಸುಮಾರು 94 ಮಂದಿಯಲ್ಲಿ 80 ವಿದ್ಯಾರ್ಥಿಗಳು ಈ ವರ್ಷ ದಿಲ್ಲಿಯ ಪ್ರತಿಷ್ಠಿತ ವಿದ್ಯಾಲಯಗಳಲ್ಲಿ ಸೀಟು ಪಡೆಯುವಲ್ಲಿ ಸಫ‌ಲರಾಗಿದ್ದಾರೆ. ಈ ಹೆಮ್ಮೆಯ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಎಸ್‌ಸಿ, ಎಸ್‌ಟಿ ಮತ್ತು ಓಬಿಸಿ ವರ್ಗಕ್ಕೆ ಸೇರಿದವರಾಗಿದ್ದಾರೆ.

ತೆಲಂಗಾಣದ ಸಮಾಜ ಕಲ್ಯಾಣ ಮತ್ತು ಬುಡಕಟ್ಟು ಅಭಿವೃದ್ಧಿ ಶಾಲೆಗಳಲ್ಲಿ ಕಲಿತ ಈ ವಿದ್ಯಾರ್ಥಿಗಳು ದಿಲ್ಲಿ ವಿವಿಗೆ ಸೇರಿದ ಪ್ರತಿಷ್ಠಿತ ರಾಮಜಾಸ್‌ ಕಾಲೇಜ್‌, ಹಿಂದು ಕಾಲೇಜ್‌, ಹಂಸ ರಾಜ್‌ ಕಾಲೇಜ್‌ ಮತ್ತು ಲೇಡಿ ಶ್ರೀರಾಮ್‌ ಕಾಲೇಜ್‌ನಲ್ಲಿ ಸೀಟು ಪಡೆಯುವ ಮೂಲಕ ತಾವು ಸೇರಿದ ಸಮುದಾಯ, ಇಡಿಯ ಸಮಾಜ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಇನ್ನೊಂದು ಅಚ್ಚರಿಯ ಮತ್ತು ಹೆಮ್ಮೆಯ ಸಂಗತಿ ಏನೆಂದರೆ ಈ ವಿದ್ಯಾರ್ಥಿಗಳು ಸಾಮಾನ್ಯ ಕೋಟಾದಲ್ಲೇ ಸೀಟುಗಳನ್ನು ಬಾಚಿಕೊಂಡಿರುವುದು.

ದಿಲ್ಲಿ ವಿಶ್ವವಿದ್ಯಾಲಯ ಜೂನ್‌ 19ರಂದು 2018-19ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳ ಸೇರ್ಪಡೆಗಾಗಿ ಮೊದಲ ಕಟಾಫ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಕಟಾಫ್ ಪಟ್ಟಿಯು ಜೂನ್‌ 25ರ ಸೋಮವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ.

Comments are closed.