ರಾಷ್ಟ್ರೀಯ

66ರ ವಯಸ್ಸಿನಲ್ಲಿ ಒಂಟಿತನ ದೂರಮಾಡಲು ಮದುವೆಯಾದ ನಿವೃತ್ತ ಪೊಲೀಸ್ ನೌಕರ

Pinterest LinkedIn Tumblr


ಕೋಲ್ಕತ: ನಗರದ ನಿವೃತ್ತ ಪೊಲೀಸ್ ಸಿಬ್ಬಂದಿಯೊಬ್ಬರು 66 ರ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. ತನ್ನ ಜೀವನದ ಒಂಟಿತನವನ್ನು ದೂರ ಮಾಡಲು ಪ್ರಶಾಂತ್ ಘೋಷ್ ಈ ನಿರ್ಧಾರ ಕೈಗೊಂಡಿದ್ದು, 45ರ ವಯಸ್ಸಿನ ಮಹಿಳೆಯೊಬ್ಬರನ್ನು ತನ್ನ ಬಾಳ ಸಂಗಾತಿಯನ್ನಾಗಿ ಆಯ್ಕೆಮಾಡಿಕೊಂಡಿದ್ದಾರೆ.

ಮದುವೆಯಾಗುವ ನಿರ್ಧಾರ ಮಾಡಿದ ಪಶ್ಚಿಮ ಬಂಗಾಳದ ಪ್ರಶಾಂತ್ ಘೋಷ್, ಪರ್ಫೆಕ್ಟ್ ಪಾರ್ಟ್‌ನರ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಬಳಿಕ, ಅವರು ಒಂದು ಮದುವೆಯಾಗಿ ವಿಚ್ಛೇದನ ಪಡೆದಿರುವ ಬಬ್ಲಿ ಸರ್ಕಾರ್ ಅವರನ್ನು ವಿವಾಹವಾಗಿದ್ದಾರೆ. ಪತ್ರಿಕೆಯೊಂದರಲ್ಲಿ ಬಂದಿದ್ದ ಜಾಹೀರಾತಿನ್ನು ನೋಡಿ ಇಬ್ಬರೂ ಜೋಡಿಯಾಗಿರುವುದು ವಿಶೇಷ.

ಪ್ರಶಾಂತ್‌ ಅವರಿಗೆ ಈಗಾಗ್ಲೇ ಒಮ್ಮೆ ವಿವಾಹವಾಗಿತ್ತಾದರೂ, ಅವರ ಹೆಂಡತಿ ತೀರಿಕೊಂಡಿದ್ದರು. ಈ ಘಟನೆ ಬಳಿಕ ತನ್ನ ಜೀವನದಲ್ಲಿ ಒಂಟಿತನವನ್ನು ದೂರ ಮಾಡಲು ನಿರ್ಧರಿಸಿದ್ದು, ಮೇ 30ರಂದು ಪ್ರಶಾಂತ್ ಹಾಗೂ ಬಬ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ಆದರೆ, ಅಧಿಕೃತವಾಗಿ ಜೋಡಿಯಾದ ಬಳಿಕವೂ ತಮ್ಮ ವಿವಾಹದ ಸಮಾರಂಭ ನಡೆಯಲಿಲ್ಲ ಎಂದು ಬೇಸರ ಪಟ್ಟುಕೊಂಡ ನಿವೃತ್ತ ಪೊಲೀಸ್ ನೌಕರ ವಿಶೇಷವಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ಹೀಗಾಗಿ, ಸೋಮವಾರ ನವಜೋಡಿಗಳು ಸಾಂಪ್ರದಾಯಿಕವಾಗಿ ವಿವಾಹವಾಗಿದ್ದು, ತಮ್ಮ ಹತ್ತಿರದವರಿಗೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್ ಮನೆಯಲ್ಲಿ ಆರತಕ್ಷತೆ ಸಮಾರಂಭವನ್ನು ಏರ್ಪಡಿಸಿದ್ದರು.

Comments are closed.