ರಾಷ್ಟ್ರೀಯ

‘ನಿಮ್ಮ ಸ್ತನಗಳು ನಿಜವೇ ?’ ಇದು ಶಾಲೆಯ ಸಂದರ್ಶನದಲ್ಲಿ ಶಿಕ್ಷಕಿಗೆ ಕೇಳಿದ ಅತ್ಯಂತ ಭಯಾನಕ ಪ್ರಶ್ನೆ!

Pinterest LinkedIn Tumblr

ಕೋಲ್ಕತ್ತಾ: ಶಾಲಾ ಶಿಕ್ಷಕಿ ವೃತ್ತಿಗಾಗಿ ತಮ್ಮ ಡಬಲ್ ಎಂಎ(ಭೂಗೋಳ ಮತ್ತು ಇಂಗ್ಲೀಷ್) ಮತ್ತು ಬಿಎಡ್ ಪದವಿ ಸಾಕು ಎಂದುಕೊಂಡಿದ್ದ 30 ವರ್ಷದ ಮಹಿಳೆಯೊರ್ವರಿಗೆ ಸಂದರ್ಶಕರು ಕೇಳಲಾದ ಪ್ರಶ್ನೆಯಿಂದ ದಿಗ್ಬ್ರಾಂತರಾದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಶಾಲಾ ಶಿಕ್ಷಕರಿಗೆ ಸಾಮಾನ್ಯ ಜ್ಞಾನದ ಕುರಿತಾದ ಪ್ರಶ್ನೆಗಳನ್ನು ಕೇಳುಲುವು ಸಾಮಾನ್ಯ ಆದರೆ. ಇಲ್ಲಿ 30 ವರ್ಷದ ಸುಚಿತ್ರಾ ಡೇ ಅವರಿಗೆ ನಿಮ್ಮ ಸ್ತನಗಳು ನಿಜವೇ, ನೀವು ಮಗುವಿಗೆ ಜನ್ಮ ನೀಡಬಹುದೇ ಎಂಬ ಪ್ರಶ್ನೆಗಳನ್ನು ಕೇಳಿದ್ದು ಇದರಿಂದ ತಾವು ಆಘಾತಕ್ಕೆ ಒಳಗಾಗಿದ್ದಾಗಿ ತಮ್ಮ ಅನುಭವವನ್ನು ಸುಚಿತ್ರಾ ಅವರು ಹೇಳಿಕೊಂಡಿದ್ದಾರೆ.

ಹಿರಣ್ಮೆ ಡೇ ಆಗಿದ್ದ ಸುಚಿತ್ರಾ ಡೇ ಅವರು 2017ರಲ್ಲಿ ಲಿಂಗ ಪರಿವರ್ತನಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಸಂದರ್ಶನಕ್ಕೆ ಹೋಗಿದ್ದಾಗ ನನ್ನ ಪದವಿ ಅಥವಾ 10 ವರ್ಷದ ಬೋಧನೆ ಅನುಭವ ಸಂದರ್ಶಕರಿಗೆ ಬೇಕಾಗಿರಲಿಲ್ಲ. ಅವರು ಕೇಳಿದ್ದು ನಿಮ್ಮ ಸ್ತನಗಳು ನಿಜವೇ? ನೀವು ಮಗುವಿಗೆ ಜನ್ಮ ನೀಡಬಹುದಾ? ಎಂದು ಕೇಳಿದ್ದರು ಎಂದು ಸುಚಿತ್ರಾ ಡೇ ಹೇಳಿಕೊಂಡಿದ್ದಾರೆ.

ಸಂದರ್ಶನದಲ್ಲಿ ಅವರು ನನ್ನನ್ನು ಪುರುಷನಿಂದ ಮಹಿಳೆಗೆ ಲಿಂಗ ಪರಿವರ್ತನೆ ಮಾಡಿಕೊಂಡ ತೃತೀಯ ಲಿಂಗಿಯಂತೆ ಕಂಡರು. ಈ ದೇಶದಲ್ಲಿ ತೃತೀಯ ಲಿಂಗಿಗಳನ್ನು ಕೆಳಮಟ್ಟದವರನ್ನು ಕಾಣುವಂತೆ ನೋಡಲಾಗುತ್ತಿದೆ, ಹಾಸ್ಯಾಸ್ಪದವು ಜೀವನದ ಒಂದು ಮಾರ್ಗವಾಗಿದೆ ಎಂದು ಹೇಳಿದರು.

2014ರಲ್ಲೇ ಸುಪ್ರೀಂಕೋರ್ಟ್ ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ವರ್ಗವನ್ನು ರಚಿಸಿತ್ತು. ತೃತೀಯ ಲಿಂಗಿಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಘೋಷಿಸಿತ್ತು. ಈ ವರ್ಗದಲ್ಲಿ ತೃತೀಯ ಲಿಂಗಿಗಳು ಉದ್ಯೋಗಗಳನ್ನು ಪಡೆಯಬಹುದಾಗಿದೆ.

Comments are closed.