ರಾಷ್ಟ್ರೀಯ

128GB RAM, 6TB ಸ್ಟೋರೆಜ್‌ನೊಂದಿಗೆ ಜಗತ್ತಿನ ಮೊದಲ ಲ್ಯಾಪ್‌ಟಾಪ್ ಬಿಡುಗಡೆ

Pinterest LinkedIn Tumblr


ಹೊಸದಿಲ್ಲಿ: ನಿಮಗಿದು ನಂಬಲು ಸಾಧ್ಯವೇ? ಹೌದು, 128ಜಿಬಿ ರ‍್ಯಾಮ್ ಹಾಗೂ 6ಟಿಬಿ ಸ್ಟೋರೆಜ್ ವ್ಯವಸ್ಥೆಯನ್ನು ಹೊಂದಿರುವ ಜಗತ್ತಿನ ಮೊದಲ ಲ್ಯಾಪ್‌ಟಾಪ್ ಲೋಕಾರ್ಪಣೆಯಾಗಿದೆ. ಅದುವೇ,

ಲೆನೊವೊ ಥಿಂಕ್‌ಪ್ಯಾಡ್ ಪಿ52.

ನೆಕ್ಸ್ಟ್ ಬಿಎಲ್‌ಡಿ ಕಾನ್ಫೆರೆನ್ಸ್‌ನಲ್ಲಿ (NXT BLD) ಅನಾವರಣಗೊಂಡಿರುವ ನೂತನ ಲ್ಯಾಪ್‌ಟ್ಯಾಪ್ ವಿಆರ್ ಫೀಚರ್ ಪಡೆಯಲಿದೆ. ಹಾಗಿದ್ದರೂ ಬೆಲೆ ವಿವರಗಳನ್ನು ಇನ್ನೂ ಬಹಿರಂಗಗೊಳಿಸಿಲ್ಲ.

ವಿಶೇಷತೆಗಳು:
15.6 ಇಂಚುಗಳ 4ಕೆ ಟಚ್‌ಸ್ಕ್ರೀನ್ ಡಿಸ್‌ಪ್ಲೇ,

1920×1080 ಪಿಕ್ಸೆಲ್ ರೆಸೊಲ್ಯೂಷನ್,
8ನೇ ತಲೆಮಾರಿನ ಇಂಟೆಲ್ Xeon ಹೆಕ್ಸಾ ಕೋರ್ ಪ್ರೊಸೆಸರ್,
Nvidia Quadro P3200 GPU,
ಬ್ಲ್ಯಾಕ್ ಬಾಡಿ ಡಿಸೈನ್,
ಭಾರ: 2.5 ಕೆ.ಜಿ.
ಎಚ್‌ಡಿ ವೆಬ್‌ಕ್ಯಾಮ್, ವಿಡಿಯೋ ಕಾಲಿಂಗ್

ಐದು ಏಪರೇಟಿಂಗ್ ಸಿಸ್ಟಂಗಳ ಆಯ್ಕೆ: ವಿಂಡೋಸ್ 10 ಪ್ರೊ ಫಾರ್ ವರ್ಕ್‌ಸ್ಟೇಷನ್, ವಿಂಡೋಸ್ 10 ಪ್ರೊ, ವಿಂಡೋಸ್ 10 ಹೋಮ್, Ubuntu ಮತ್ತು Linux

ಕನೆಕ್ಟಿವಿಟಿ: USB 3.1 Type-A, two USB-C/Thunderbolt, one HDMI 2.0, one mini DisplayPort 1.4, and a SD card reader, Wi-Fi, Bluetooth ಮತ್ತು 4G LTE.

Comments are closed.