ರಾಷ್ಟ್ರೀಯ

ಸಮಾಜವನ್ನು ಹಾಳು ಮಾಡುವ ಸಂಸ್ಕಾರ ಇಲ್ಲದ ಮಕಳನ್ನು ಹೆರುವುದಕ್ಕಿಂತ ಮಹಿಳೆಯರು ಬಂಜೆಯಾಗಿರುವುದೇ ವಾಸಿ:  ಬಿಜೆಪಿ ಶಾಸಕ ಪನ್ನಾಲಾಲ್

Pinterest LinkedIn Tumblr


ಹೊಸದಿಲ್ಲಿ: ಮಹಿಳೆಯರು ’ಸಂಸ್ಕಾರ’ ಇಲ್ಲದ ಮಕ್ಕಳನ್ನು ಹೆರುವುದಕ್ಕಿಂತ ಬಂಜೆಯಾಗಿರುವುದೇ ವಾಸಿ ಎಂದು ಹೇಳುವ ಮೂಲಕ ಮಧ್ಯಪ್ರದೇಶ ಗುನಾ ಕ್ಷೇತ್ರದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.

ಬುಧವಾರ ಅವರು ಸಮಾವೇಶವೊಂದನ್ನು ಉದ್ದೇಶಿ ಮಾತನಾಡುತ್ತಾ, “ಸಮಾಜವನ್ನು ಹಾಳು ಮಾಡುವ ಸಂಸ್ಕಾರ ಇಲ್ಲದ ಮಕಳನ್ನು ಹೆರುವುದಕ್ಕಿಂತ ಮಹಿಳೆಯರು ಬಂಜೆಯಾಗಿರುವುದೇ ವಾಸಿ” ಎಂದು ಹೇಳಿದ್ದಾರೆ.

ಗರೀಬಿ ಹಠಾವೋ (ಬಡತನ ನಿರ್ಮೂಲನೆ ಮಾಡಿ) ಎಂಬ ಘೋಷಣೆಯನ್ನು ಕಾಂಗ್ರೆಸ್ ಮಾಡಿತ್ತು. ಆದರೆ ಆ ಪಕ್ಷ ಬಡತನಕ್ಕೆ ಬದಲಾಗಿ ಬಡವರನ್ನೇ ನಿರ್ಮೂಲನೆ ಮಾಡಿತು. ಕೆಲವು ಮಹಿಳೆಯರು ಇಂತಹ ಮುಖಂಡರಿಗೆ ಜನ್ಮ ನೀಡುತ್ತಿರುತ್ತಾರೆ. ಸಮಾಜವನ್ನು ಹಾಳು ಮಾಡುವ ಸಂಸ್ಕಾರ ಇಲ್ಲದ ಮಕ್ಕಳನ್ನು ಹೆರುವುದಕ್ಕಿಂತ, ಮಹಿಳೆಯರು ಬಂಜೆಯಾಗಿರುವುದು ಉತ್ತಮ ಎಂದಿದ್ದಾರೆ.

ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಮದುವೆ ಬಗ್ಗೆಯೂ ಇದೇ ರೀತಿ ವಿವಾದಾಸ್ಪದ ಹೇಳಿಕೆ ನೀಡಿದ್ದರು. ‘ಕೊಹ್ಲಿ ಇಟಲಿಯಲ್ಲಿ ಮದುವೆಯಾಗಿರುವುದರಿಂದ ‘ಯೂಥ್‌ ಐಕಾನ್‌’ ಎಂದು ಕರೆಯಿಸಿಕೊಳ್ಳಲು ಅವರು ಅರ್ಹರಲ್ಲ. ಕೋಹ್ಲಿ ಭಾರತದಲ್ಲಿ ಹಣ ಮತ್ತು ಹೆಸರು ಎರಡನ್ನೂ ಗಳಿಸಿದರು. ಆದರೆ, ಶ್ರೀರಾಮ ವಿವಾಹವಾದ ನಾಡಿನಲ್ಲಿ ವಿವಾಹವಾಗಲು ಸೂಕ್ತ ಸ್ಥಳ ಕಂಡುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ವಿದೇಶದಲ್ಲಿ ವಿವಾಹವಾಗಿದ್ದರಿಂದ ಅವರು ದೇಶಪ್ರೇಮವಿಲ್ಲದವರು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

Comments are closed.