ರಾಷ್ಟ್ರೀಯ

ಮಕ್ಕಳ ಕಳ್ಳರೆಂದು ಶಂಕಿಸಿ ಇಬ್ಬರು ಯುವಕರ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ

Pinterest LinkedIn Tumblr

ಹತ್ಯೆಗೀಡಾದ ಅಭಿಜೀತ್ ನಾಥ್ -ನಿಲೋತ್ಪಲ್ ದಾಸ್

ಗೌಹಾಟಿ(ಅಸೋಮ್): ಅಸೋಮ್ ನ ಕರ್ಬಿ ಅಂಗ್ಲೋಂಗ್ ಜಿಲ್ಲೆಯಲ್ಲಿ ಕಳೆದ ವಾರ ಮಕ್ಕಳ ಕಳ್ಳರೆಂದು ಶಂಕಿಸಿ ಇಬ್ಬರು ಯುವಕರನ್ನು ಹತ್ಯೆ ಮಾಡಿದ್ದ ಘಟನೆ ಸಂಬಂಧ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೋಲೀಸರು ತಿಳಿಸಿದರು.

ಇದರೊಡನೆ ಘಟನೆ ಸಂಬಂಧ ಬಂಧಿತರಾದವರ ಸಂಖೆ 64ಕ್ಕೆ ತಲುಪಿರುವುದಾಗಿ ಅವರು ಮಾಹಿತಿ ನೀಡಿದರು.

ಕರ್ಬಿ ಅಂಗ್ಲೋಂಗ್ ಪೋಲೀಸರು ಇಬ್ಬರು ಯುವಕರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜೋಝ್ ತಿಮಂಗ್ ಅಲಿಯಾಸ್ ’ಅಲ್ಫಾ’ ನನ್ನು ಬಂಧಿಸಿದ್ದಾರೆ. ಬಲೂರ್ ಘಾಟ್ ಪ್ರದೇಶದಲ್ಲಿ ಈತನ ಬಂಧನವಾಗಿದೆ ಎಂದು ಪೊಲೀಸ್ ಅಧೀಕ್ಷಕ ಎಸ್ ಪಿ ಗಂಜಲಾ ಹೇಳಿದ್ದಾರೆ.

ತಿಮಂಗ್ ಜನರಲ್ಲಿ ಇಲ್ಲಸಲ್ಲದ ಊಹಾಪೋಹವನ್ನು ಹುಟ್ಟು ಹಾಕಿದ್ದಲ್ಲದೆ ತಮ್ಮ ವಾಹನದಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳನ್ನು ಮಕ್ಕಳ ಕಳ್ಳರೆಂದು ಬಿಂಬಿಸಿದ್ದನು. ಗ್ರಾಮಸ್ಥರಿಗೆ ದೂರವಾಣಿ ಕರೆ ಮಾಡಿ ಮಕ್ಕಳ ಕಳ್ಳರ ಬಗ್ಗೆ ವದಂತಿಗಳನ್ನು ಹರಡಿಸಲು ಕಾರಣವಾಗಿದ್ದನೆಂದು ಎಸ್ ಪಿ ಗಂಜಲಾ ವಿವರಿಸಿದರು.

ಆರೋಪಿಯ ಬಂಧನಕ್ಕಾಗಿ ಫೊಳಿಸರು ಭಾರೀ ಕಾರ್ಯಾಚರಣೆ ನಡೆಸಿದ್ದರು. ಆದರೆ ಅಂತಿಮವಾಗಿ ಬುಧವಾರ ಬೆಳಿಗ್ಗೆ ಆರೋಪಿ ಬಂಧನವಾಗಿದೆ ಎಂದು ಅವರು ಹೇಳಿದ್ದಾರೆ.

ತಿಮಂಗ್ ಕಾಂಗ್ಥಿಲ್ಯಾಂಗ್ಸ್ಸೊಗ್ರಾಮದ ನಿವಾಸಿಯಾಗಿದ್ದು ಶುಕ್ರವಾರ ಮಧ್ಯಾಹ್ನ ಮೃತ ಯುವಕರು ಅದೇ ಹಳ್ಳಿಗೆ ತೆರಳಿದ್ದರು.

ಇಬ್ಬರು ಸ್ನೇಹಿತರು – ನಿಲೋತ್ಪಲ್ ದಾಸ್ (29) ಮತ್ತು ಅಭಿಜೀತ್ ನಾಥ್ (30) – ಕಾರ್ಬಿ ಆಂಗ್ಲೋಂಗ್ ಜಿಲ್ಲೆಯ ಪಂಜುರಿಯಲ್ಲಿ ಜನ ಸಮೂಹದಿಂದ ಹತ್ಯೆಗೀಡಾಗಿದ್ದರು. ಇಬ್ಬರೂ ಯುವಕರನ್ನು ಮಕ್ಕಳ ಅಪಹರಣಕಾರರೆಂದು ಭಾವಿಸಿದ್ದ ಜನರ ಗುಂಪು ಅವರಿಗೆ ಮನಬಂದ್ಂತೆ ಥಳಿಸಿ ಹತ್ಯೆ ಮಾಡಿತ್ತು.

Comments are closed.