ರಾಷ್ಟ್ರೀಯ

ಕೇಂದ್ರ ಸಚಿವೆ ಅನುಪ್ರಿಯಾರನ್ನು ಚುಡಾವಣೆ ಮಾಡಿದ ದುಷ್ಕರ್ಮಿಗಳು

Pinterest LinkedIn Tumblr


ವಾರಾಣಸಿ : ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್‌ ಅವರು ಉತ್ತರ ಪ್ರದೇಶದಲ್ಲಿ ಕಿಡಿಗೇಡಿಗಳಿಂದ ಚುಡಾವಣೆಗೆ ಗುರಿಯಾದ ಘಟನೆ ನಡೆದಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವೆಯಾಗಿರುವ ಅನುಪ್ರಿಯಾ ಪಟೇಲ್‌ ಅವರು ನಿನ್ನೆ ಸೋಮವಾರ ರಾತ್ರಿ ತಮ್ಮ ಮಿರ್ಜಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ವಾರಾಣಸಿಗೆ ಮರಳುತ್ತಿದ್ದ ಮಾರ್ಗದಲ್ಲಿ ಈ ಘಟನೆ ನಡೆಯಿತು.

ಔರಾಯಿ – ಮಿರ್ಜಾಮುರಾದ್‌ ನಡುವೆ ಸಚಿವೆ ಅನುಪ್ರಿಯಾ ತಮ್ಮ ಕಾರಿನಲ್ಲಿ ಬೆಂಗಾವಲು ಕಾರುಗಳೊಂದಿಗೆ ಸಾಗುತ್ತಿದ್ದಾಗ ಮೂವರು ಕಿಡಿಗೇಡಿಗಳು ನಂಬರ್‌ ಪ್ಲೇಟ್‌ ಇಲ್ಲದ ಕಾರಿನಲ್ಲಿ ಅಡ್ಡ ಬಂದು ಅಶ್ಲೀಲ ಘೋಷಣೆಗಳನ್ನು ಕೂಗುತ್ತಾ ಓವರ್‌ ಟೇಕ್‌ ಮಾಡಿದರು.

ಭದ್ರತಾ ಸಿಬಂದಿಗಳು ನೀಡಿದ್ದ ಎಲ್ಲ ಎಚ್ಚರಿಕೆಗಳನ್ನು ಈ ಕಿಡಿಗೇಡಿಗಳು ಗಾಳಿಗೆ ತೂರಿ ತಮ್ಮ ದುಷ್ಕೃತ್ಯ ಮುಂದುವರಿಸಿದ್ದಲ್ಲದೆ ಭದ್ರತಾ ಸಿಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದರು. ಕೊನೆಗೂ ಈ ಕಿಡಿಗೇಡಿಗಳನ್ನು ಮಿರ್ಜಾಮುರಾದ್‌ ಪೊಲೀಸರು ಬಂಧಿಸುವಲ್ಲಿ ಸಫ‌ಲರಾಗಿ ಅವರ ಕಾರನ್ನು ವಶಕ್ಕೆ ತೆಗೆದುಕೊಂಡರು.

Comments are closed.