ರಾಷ್ಟ್ರೀಯ

ಮಕ್ಕಳ ನಡುವೆ ಒಡಕು; ಜತೆಗೂಡಿ ಲಾಲು 71ನೇ ಹುಟ್ಟುಹಬ್ಬ ಆಚರಿಸಿದ ಆರ್ ಜೆಡಿ

Pinterest LinkedIn Tumblr


ಪಟ್ನಾ : ಆರ್‌ಜೆಡಿ ನಾಯಕರಾದ ತೇಜ್‌ ಪ್ರತಾಪ್‌ ಯಾದವ್‌ ಮತ್ತು ತೇಜಸ್ವಿ ಯಾದವ್‌ ಅವರೊಳಗೆ ಒಡಕು ಮೂಡಿದೆ ಎಂಬ ವರದಿಗಳ ನಡುವೆಯೇ ಇಂದು ಯಾದವ್‌ ಕುಟುಂಬ, ಬಹುಕೋಟಿ ವೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ 71ನೇ ಹುಟ್ಟುಹಬ್ಬವನ್ನು ಇಂದಿಲ್ಲಿ ಆಚರಿಸಿತು. ಪಕ್ಷದ ಕಾರ್ಯಕರ್ತರು ಕೂಡ ಈ ಸಮಾರಂಭದಲ್ಲಿ ಪಾಲ್ಗೊಂಡರು.

ಮೇವು ಹಗರಣದ ಆರೋಪಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲು ಯಾದವ್‌ ಅವರು ಪ್ರಕೃತ ಬಿರ್ಸಾ ಮುಂಡಾ ಸೆಂಟ್ರಲ್‌ ಜೈಲಿನಲ್ಲಿ ಇದ್ದಾರೆ.

2017ರ ಡಿಸೆಂಬರ್‌ 23ರಿಂದ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಲಾಲು ಈಚೆಗೆ ಅನಾರೋಗ್ಯದ ಪ್ರಯುಕ್ತ ರಾಂಚಿ ಮತ್ತು ಅನಂತರ ದಿಲ್ಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅದಕ್ಕೆ ಮೊದಲು ಮಗನ ಮದುವೆಗೆಂದು ಮತ್ತು ಅನಂತರ ವೈದ್ಯಕೀಯ ನೆಲೆಯಲ್ಲಿ ಪೆರೋಲ್‌ ಪಡೆದಿದ್ದರು.

Comments are closed.