ರಾಷ್ಟ್ರೀಯ

ಗೂಗಲ್​ನಿಂದ 400 ರೈಲು ನಿಲ್ದಾಣದಲ್ಲಿ ಉಚಿತ ಇಂಟರ್​ನೆಟ್​ ಲಭ್ಯ

Pinterest LinkedIn Tumblr


ನವದೆಹಲಿ: ಕೇಂದ್ರ ಸರಕಾರದ ಮಹತ್ತರ ಯೋಜನೆಯಲ್ಲಿ ಒಂದಾಗಿರುವ ಡಿಜಿಟಲ್​ ಇಂಡಿಯಾಗೆ ಬೆಂಬಲ ಸೂಚಿಸಿದ್ದ ಗೂಗಲ್​ ಸಂಸ್ಥೆ ಇದೀಗ ಭಾರತದನ 400 ರೈಲ್ವೇ ನಿಲ್ದಾಣದಲ್ಲಿ ಉಚಿತ ವೈಫೈ ಸೇವೆಯನ್ನು ಆರಂಭಿಸಿದೆ ಎಂದು ಹೇಳಿದೆ.

ರೈಲ್​ಟೆಲ್​ನೊಂದಿಗೆ ಸಹಭಾಗಿತ್ವದಲ್ಲಿ ಗೂಗಲ್​ 400 ರೈಲ್ವೇ ನಿಲ್ದಾಣದಲ್ಲಿ ಉಚಿತ ಇಂಟರ್​ನೆಟ್​ ಸೇವೆಯನ್ನು ನೀಡುತ್ತಿದ್ದು, ಗುರುವಾರದಂದು ಅಸ್ಸಾಂನ ದಿಬ್ರಾಗರ್​ನ ನಿಲ್ದಾಣದಲ್ಲಿ ಉಚಿತ ಸೇವೆಯನ್ನು ಆರಂಭಿಸಿದೆ. ‘ಲಕ್ಷಾಂತರ ಮಂದಿಗೆ ಉತ್ತಮ ಗುಣಮಟ್ಟದ ಉಚಿತ ಇಂಟರ್​ನೆಟ್​ ಸೇವೆ ಒದಗಿಸುವ ಈ ಯೋಜನೆ ನಡೆದು ಬಂದ ಹಾದಿ ಬಹಳ ಮಹತ್ತರವಾಗಿದೆ ಎಂದು ಪಾರ್ಟ್ನರ್​ಶಿಪ್​ ಇಂಡಿಯಾದ ನಿರ್ದೇಶಕ ಕೆ. ಸೂರಿ ಹೇಳಿದ್ದಾರೆ.

ಪ್ರತೀ ತಿಂಗಳು 80 ಲಕ್ಷಕ್ಕೂ ಅಧಿಕ ಮಂದಿ ಇಂಟರ್​ನೆಟ್​ ಬಳಸುತ್ತಿದ್ದು, ಈ ಯೋಜನೆಯಿಂದಾಗಿ ಭಾರತದಂತಹ ಹಲವಾರು ರಾಷ್ಟ್ರಗಳು ಇಂಟರ್​ನೆಟ್​ ಬಳಕೆ ಮಾಡುವಂತಾಗಿದೆ. ರೈಲ್​ವೈರ್​ಎಂಬ ಹೆಸರಿನಡಿ ಈ ಸೇವೆಯನ್ನು ನೀಡಲಾಗಿದ್ದು, ಸುಮಾರು 30 ನಿಮಿಷಗಳ ಕಾಲ ಬಳಕೇದಾರರಿಗೆ ಉಚಿತ ಸೇವೆ ದೊರಕುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಮುಂದಿನ ಬಿಲಿಯನ್​ ಮಂದಿಗೆ ಇಂಟರ್​ನೆಟ್​ ಸೇವೆ ನೀಡುವ ಉದ್ದೇಶ ಹೊಂದಿರುವ ಗೂಗಲ್​ನ ಒಂದು ಹಂತ ಪುಣೆಯಲ್ಲಿ ಪೂರ್ತಿಯಾಗಿದೆ, ಅದರಂತೆಯೇ ರೈಲ್​ಟೆಲ್​ ಕೂಡಾ ಭಾರತೀಯ ರೈಲ್ವೇ ನಿಲ್ದಾಣದಲ್ಲಿ ಉತ್ತಮ ಗುಣಮಟ್ಟದ ಇಂಟರ್​ನೆಟ್​ ಸೇವೆ ಒದಗಿಸುವಲ್ಲಿ ಸಫಲವಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Comments are closed.