ರಾಷ್ಟ್ರೀಯ

ಮಾರಣಾಂತಿಕ ನಿಫಾ ರೋಗಾಣು ನಿಯಂತ್ರಣ: ಕೇಂದ್ರ ಸಚಿವ ಅಶ್ವಿ‌ನಿ ಚೌಬೆ

Pinterest LinkedIn Tumblr


ಕೋಲ್ಕತ: ಮಾರಣಾಂತಿಕ ನಿಫಾ ರೋಗಾಣುವನ್ನು ನಿಯಂತ್ರಿಸಲಾಗಿದೆ; ಹಾಗಾಗಿ ಈ ರೋಗಾಣು ಕಾಣಿಸಿಕೊಂಡ ಕೇರಳದಿಂದ ಯಾರೂ ಓಡಿ ಹೋಗಬೇಕಾದದ್ದಿಲ್ಲ ಎಂದು ಕೇಂದ್ರ ಸಹಾಯಕ ಆರೋಗ್ಯ ಸಚಿವ ಅಶ್ವಿ‌ನಿ ಚೌಬೆ ಹೇಳಿದ್ದಾರೆ.

ಕೇರಳದಲ್ಲಿ ನಿಫಾ ವೈರಸ್‌ಗೆ ಒಟ್ಟು 17 ಮಂದಿ ಬಲಿಯಾಗಿದ್ದಾರೆ; ಆದರೆ ಅನಂತರದಲ್ಲಿ ಹೊಸ ಸೋಂಕಿನ ಪ್ರಕರಣಗಳು ಕಂಡು ಬಂದಿಲ್ಲ ಎಂದವರು ಹೇಳಿದರು.

ನಿಫಾ ವೈರಸ್‌ಗೆ ಹೆದರಿ ಅನೇಕರು ಕೇರಳದಿಂದ ಪಶ್ಚಿಮ ಬಂಗಾಲಕ್ಕೆ ಮರಳುತ್ತಿರುವುದಾಗಿ ವರದಿಯಗಿದೆ; ಆದರೆ ಈಗ ನಿಫಾ ವೈರಸನ್ನು ಈಗ ನಿಯಂತ್ರಿಸಲಾಗಿರುವುದರಿಂದ ಯಾರೂ ಕೇರಳದಿಂದ ಗುಳೇ ಹೋಗಬೇಕಾಗಿಲ್ಲ; ನಮ್ಮ ಪರಿಣತರ ವೈದ್ಯರ ತಂಡವೇ ನಿಫಾ ವೈರಸ್‌ ಮೊದಲಾಗಿ ಕಾಣಿಸಿಕೊಂಡ ಕೇರಳದ ಕೋಯಿಕ್ಕೋಡ್‌ನ‌ಲ್ಲಿದೆ ಎಂದು ಸಚಿವರು ಹೇಳಿದರು.

Comments are closed.