ರಾಷ್ಟ್ರೀಯ

ಸಿಡಿಲು ಬಡಿಯುವುದನ್ನು ಮೊಬೈಲ್ ಮೂಲಕ ಸೆರೆಗೆ ಯತ್ನ: ಯುವಕ ಸಾವು

Pinterest LinkedIn Tumblr


ಚೆನ್ನೈ: ಸಿಡಿಲು ಬಡಿಯುವುದನ್ನು ಮೊಬೈಲ್ ಮೂಲಕ ಸೆರೆಹಿಡಿಯಲು ಯತ್ನಿಸಿದ ಯುವಕನಿಗೇ ಸಿಡಿಲು ಬಡಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಪ್ರಕರಣ ಚೆನ್ನೈನಲ್ಲಿ ವರದಿಯಾಗಿದೆ.

ಎಕ್ಸ್‌ಪೋರ್ಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಎಂಬ ಯುವಕ ಗೆಳೆಯರೊಂದಿಗೆ ತಿರುವಳ್ಳೂರ್‌ಗೆ ಸಿಗಡಿ ಕೃಷಿ ನೋಡಲು ಹೋಗಿದ್ದರು. ಆ ಸಂದರ್ಭದಲ್ಲಿ ಮಳೆ ಆರಂಭವಾಗುತ್ತಲಿತ್ತು. ರಮೇಶ್ ಮಳೆ ನೋಡಲು ಎಂದು ಹೊರಗೆ ಹೊಲಕ್ಕೆ ಹೋಗಿದ್ದು, ಮೊಬೈಲ್‌ನಲ್ಲಿ ಸಿಡಿಲು-ಮಿಂಚಿನ ಫೋಟೋ ತೆಗೆದುಕೊಳ್ಳುತ್ತಿದ್ದ.

ಆ ಸಂದರ್ಭದಲ್ಲಿ ಸಿಡಿಲು ಬಡಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಮುಖ ಮತ್ತು ಎದೆಗೆ ಗಾಯವಾಗಿದ್ದು, ಆರಂಬಕ್ಕಂ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Comments are closed.