ರಾಷ್ಟ್ರೀಯ

ಗುಜರಾತ್ ಶಾಸಕ ಜಿಗ್ನೇಶ್‌ ಮೇವಾನಿಗೆ ಜೀವ ಬೆದರಿಕೆ: ವೈ ಭದ್ರತೆಗೆ ಒತ್ತಾಯ

Pinterest LinkedIn Tumblr


ಅಹ್ಮದಾಬಾದ್‌ : ಗುಜರಾತ್‌ನ ವಡಗಾಂವ್‌ ಕ್ಷೇತ್ರದ ಪಕ್ಷೇತರ ಶಾಸಕ ಜಿಗ್ನೇಶ್‌ ಮೇವಾನಿ ಅವರಿಗೆ ಜೀವ ಬೆದರಿಕೆಯ ಫೋನ್‌ ಕರೆಗಳು ಬಂದಿದ್ದು ಅವರಿಗೆ ವೈ ವರ್ಗದ ಭದ್ರತೆಯನ್ನು ಒದಗಿಸುವಂತೆ ರಾಷ್ಟ್ರೀಯ ದಲಿತ ಅಧಿಕಾರ್‌ ಮಂಚ್‌ನ ನಿಯೋಗ ಗುಜರಾತ್‌ ಪೊಲೀಸ್‌ ಮುಖ್ಯಸ್ಥ ಶಿವಾನಂದ ಝಾ ಅವರನ್ನು ಒತ್ತಾಯಿಸಿದೆ.

ದುರ್ಬಲರು ಮತ್ತು ಶೋಷಿತರ ಏಳಿಗೆಗಾಗಿ ಶ್ರಮಿಸುತ್ತಿರುವ ಮೇವಾನಿ ಅವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ಈ ಹಿಂದೆ ಜೀವ ಬೆದರಿಕೆ ಬಂದಿತ್ತು. ಈಗ ಫೋನ್‌ ಕರೆಗಳ ಮೂಲಕ ಬೆದರಿಕೆ ಬಂದಿದೆ ಎಂದು ವೇಮಾನಿ ಅವರ ನಿಕಟವರ್ತಿ ಸುಬೋಧ ಪರಮಾರ್‌ ಹೇಳಿದರು.

ಮೇವಾನಿ ಸಂಘಟನೆಯ ಸಂಚಾಲಕ ಪರಮಾರ್‌ ನೀಡಿರುವ ದೂರಿನ ಪ್ರಕಾರ ರಾಜೀವ್‌ ಮಿಶ್ರಾ ಎಂಬ ಶಂಕಿತ ವ್ಯಕ್ತಿಯ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಡಗಾಂವ್‌ ಪೊಲೀಸ್‌ ಠಾಣಾಧಿಕಾರಿ ತಿಳಿಸಿದ್ದಾರೆ.

Comments are closed.