ರಾಷ್ಟ್ರೀಯ

ರಾಹುಲ್​ ಗಾಂಧಿ ಸದ್ಯ ಮದುವೆಯಾಗುತ್ತಿಲ್ಲ!

Pinterest LinkedIn Tumblr

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮದುವೆ ವದಂತಿ ಸಂಬಂಧ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ ಗಾಂಧಿ ಪತಿ ರಾಬರ್ಟ್​ ವಾದ್ರ ಅವರು ರಾಹುಲ್​ ಅವರು ಸದ್ಯ ಮದುವೆಯಾಗುತ್ತಿಲ್ಲ ಎಂದು ಖಚಿತಪಡಿಸಿದ್ದಾರೆ.

ನ್ಯೂಸ್​ ವೆಬ್​ಸೈಟ್​ ಒಂದರಲ್ಲಿ ರಾಹಲ್​ ಗಾಂಧಿ ಅವರು ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂಬ ಲೇಖನ ಪ್ರಕಟವಾದ ಬೆನ್ನಲ್ಲೆ ಬುಧವಾರ ತಮ್ಮ ಟ್ವಿಟರ್​ ಖಾತೆ ಮೂಲಕ ಪ್ರತಿಕ್ರಿಯೇ ನೀಡಿರುವ ವಾದ್ರ ಅದೊಂದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ. ಅಲ್ಲದೆ, ರಾಹುಲ್​ ಅವರಿಗೆ ಮದುವೆ ಶುಭಾಶಯಗಳು ಬರುತ್ತಿರುವ ಹಿನ್ನೆಲೆ ಇಂತಹ ಸಂದೇಶಗಳನ್ನು ನಿಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಮದುವೆ ವಿಚಾರದಲ್ಲಿ ನಾವು ಯಾವುದೇ ಗೌಪ್ಯತೆಯ ದಾರಿ ಹಿಡಿದಿಲ್ಲ. ಒಂದು ವೇಳೆ ರಾಹುಲ್​ ಅವರು ಮದುವೆಯಾಗುವುದಾಗಿ ತಮ್ಮ ವೈಯಕ್ತಿಕ ನಿರ್ಧಾರವನ್ನು ತಿಳಿಸಿದರೆ ನಾವು ಹೆಮ್ಮೆಯಿಂದಲೇ ಅದನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದ್ದಾರೆ.

ರಾಹುಲ್​ ಗಾಂಧಿಯೊಂದಿಗೆ ಕಾಂಗ್ರೆಸ್​ ಶಾಸಕಿ ಆದಿತಿ ಸಿಂಗ್ ತೆಗೆಸಿಕೊಂಡಿದ್ದ ಫೋಟೋ ವೈರಲ್​ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್​ ಮತ್ತು ಆದಿತಿ ಸಿಂಗ್​ ಅವರು ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬ ತೊಡಗಿತ್ತು.

ಈ ಸುದ್ದಿ ಎಲ್ಲಡೆ ಹರಿದಾಡುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಯ್​ಬರೇಲಿ ಶಾಸಕಿ ಆದಿತಿ ಸಿಂಗ್​ ಈ ರೀತಿಯ ತಳಬುಡವಿಲ್ಲದ ವದಂತಿಯಿಂದ ನನಗೆ ದುಃಖವಾಗಿದೆ. ರಾಹುಲ್​ ಜಿ ಅವರು ನನಗೆ ಹಿರಿಯ ಅಣ್ಣನಿದ್ದಂತೆ. ನಾನು ಧಾರ್ಮಿಕವಾಗಿ ಅವರ ಕೈಗೆ ರಕ್ಷಾ ಬಂಧನವನ್ನು ಕಟ್ಟಿದ್ದೇನೆ. ಈ ವದಂತಿ ಹಿಂದೆ ಯಾರಿದ್ದಾರೋ ಅವರು ನನಗೂ ಹಾಗೂ ರಾಹುಲ್​ ಜಿ ಅವರ ವ್ಯಕ್ತಿತ್ವಕ್ಕೂ ಕೆಡುಕು ತರುವ ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದರು.

Comments are closed.