ರಾಷ್ಟ್ರೀಯ

ಕಾಶಿ ವಿಶ್ವನಾಥ ದೇವಸ್ಥಾನ ಸ್ಫೋಟಿಸುವುದಾಗಿ ಬೆದರಿಕೆ ಪತ್ರ ರವಾನಿಸಿದ ಎಲ್ಇಟಿ ಉಗ್ರರು

Pinterest LinkedIn Tumblr

ಕಾಶಿ ವಿಶ್ವನಾಥ್ ದೇವಸ್ಥಾನ ಮತ್ತು ಕೃಷ್ಣ ಜನ್ಮಭೂಮಿ ಸ್ಫೋಟಿಸುವುದಾಗಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಬೆದರಿಕೆ ಹಾಕಿರುವುದಾಗಿ ಉತ್ತರಪ್ರದೇಶ ಪೊಲೀಸರು ರಾಜ್ಯಾದ್ಯಂತ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಕಮಾಂಡೆರ್ ಮೌಲಾನಾ ಅಂಬು ಶೇಖ್ ಕಳೆದ ತಿಂಗಳು ನೈರುತ್ಯ ರೈಲ್ವೇ ಗೆ ಪತ್ರ ರವಾನಿಸಿದ್ದು ಈ ಸಂಬಂಧ ಉತ್ತರಪ್ರದೇಶ ಪೊಲೀಸರು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಮೇ 29ರಂದು ದೆಹಲಿಯ ನೈರುತ್ಯ ರೈಲ್ವೆ ಈ ಪತ್ರವನ್ನು ಸ್ವಿಕರೀಸಿದ್ದು ಪತ್ರದಲ್ಲಿ ಶಹಾನಪುರ ಮತ್ತು ಹಪುರ್ ಸೇರಿದಂತೆ ಹಲವು ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದೆ.

ಜೂನ್ 8-10ರಂದು ಕೃಷ್ಣ ಜನ್ಮಭೂಮಿ ಮಥುರಾ ಮತ್ತು ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದು ಈ ಹಿನ್ನೆಲೆಯಲ್ಲಿ ರಾಜ್ಯದಲ್ಲ ಮುಂಜಾಗೃತ ಕ್ರಮಗಳನ್ನು ಕೊಂಡಿದ್ದು ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.