ರಾಷ್ಟ್ರೀಯ

ಗಾಂಜಾ ಸೇವನೆ ಕಾನೂನುಬದ್ಧಗೊಳಿಸಿದರೆ ಭ್ರಷ್ಟಚಾರ ಕಡಿಮೆಯಾಗುತ್ತದೆ: ಶಶಿ ತರೂರ್‌

Pinterest LinkedIn Tumblr


ಹೊಸದಿಲ್ಲಿ: ಸದಾ ಡಿಫ‌ರೆಂಟ್‌ ಆಗಿ ಆಲೋಚಿಸುವ ಆಧುನಿಕ ಚಿಂತಕ, ಕಾಂಗ್ರೆಸ್‌ ನಾಯಕ, ಶಶಿ ತರೂರ್‌ ಅವರಿಂದ ಇದೀಗ ಔಟ್‌ ಆಫ್ ದಿ ಬಾಕ್ಸ್‌ ವಿಚಾರ ಲಹರಿಯೊಂದು ಹೊರ ಬಂದಿದೆ.

ಗಾಂಜಾ ಸೇವನೆಯನ್ನು ಕಾನೂನು ಬದ್ಧಗೊಳಿಸಬೇಕು; ಹಾಗೆ ಮಾಡಿದಲ್ಲಿ ದೇಶದಲ್ಲಿನ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ತರೂರ್‌ ತಮ್ಮ ಅತ್ಯಾಧುನಿಕ ಚಿಂತನೆಯನ್ನು ಹರಿಯಬಿಟ್ಟಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ತರೂರ್‌, ಗಾಂಜಾ ಸೇವನೆಯಿಂದ ಮಾನವೀಯ ಮೌಲ್ಯಗಳು ಹೆಚ್ಚುತ್ತವೆ; ಇದರಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದೂ ಹೇಳಿದ್ದಾರೆ.

ತರೂರ್‌ ಅವರ ಪ್ರಕಾರ ದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಗಾಂಜಾ ಮಾರಾಟವಾಗುತ್ತಿದೆ; ಹಾಗಾಗಿ ಗಾಂಜಾ ಸೇವಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಗಾಂಜಾ ಸೇವನೆಯನ್ನು ಕಾನೂನುಬದ್ಧಗೊಳಿಸುವುದರಿಂದ ಸರಕಾರಕ್ಕೆ ಅತ್ಯಧಿಕ ಲಾಭ ಬರುತ್ತದೆ.

ತರೂರ್‌ ಅವರ ಚಿಂತನೆಯನ್ನು ಒಪ್ಪುವುದಾದರೆ ಎಲ್ಲ ಬಗೆಯ ಸಾಮಾಜಿಕ ಪಿಡುಗುಗಳಿಗೆ ಕಾರಣವಾಗುವ ಮತ್ತು ಸರಕಾರದ ಆದಾಯವನ್ನು ಹೆಚ್ಚಿಸಬಲ್ಲ ಸಂಗತಿಗಳನ್ನು ಕಾನೂನುಬದ್ಧಗೊಳಿಸಬೇಕಾಗುತ್ತದೆ.

Comments are closed.