ರಾಷ್ಟ್ರೀಯ

ಪೆಟ್ರೋಲ್‌ 15 ಪೈಸೆ, ಡೀಸಿಲ್‌ 14 ಪೈಸೆ ಇಳಿಕೆ

Pinterest LinkedIn Tumblr


ಹೊಸದಿಲ್ಲಿ: ಸೋಮವಾರ ಜ.4ರಂದು ಬೆಳಗ್ಗೆ 6 ಗಂಟೆಯಂದ ಜಾರಿಗೆ ಬಂದಿರುವ ಪ್ರಕಾರ ದೇಶದಲ್ಲಿ ಪೆಟ್ರೋಲ್‌ ಬೆಲೆ ಲೀಟರಿಗೆ 15 ಪೈಸೆ ಮತ್ತು ಡೀಸಿಲ್‌ ಬೆಲೆ ಲೀಟರಿಗೆ 14 ಪೈಸೆ ಇಳಿದಿದೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಪೆಟ್ರೋಲ್‌ ಮತ್ತು ಡೀಸಿಲ್‌ ಬೆಲೆಯನ್ನು ದೈನಂದಿನ ನೆಲೆಯಲ್ಲಿ ಪರಿಷ್ಕರಿಸುವ ಕ್ರಮ ದೇಶದಲ್ಲಿ ಜಾರಿಯಲ್ಲಿದೆ.

ವಿವಿಧ ಮಹಾನಾಗರಗಳಲ್ಲಿ ಇಂದು ಜಾರಿಯಲ್ಲಿರುವ ಪೆಟ್ರೋಲ್‌ ಬೆಲೆ ಈ ರೀತಿ ಇದೆ: ದಿಲ್ಲಿ : 77.96, ಕೋಲ್ಕತ : 80.60, ಮುಂಬಯಿ 85.77, ಚೆನ್ನೈ 80.94 ರೂ.

ಡೀಸಿಲ್‌ ದರ : ದಿಲ್ಲಿ : 68.97, ಕೋಲ್ಕತ :71.52, ಮುಂಬಯಿ 73.43, ಚೆನ್ನೈ : 72.82 ರೂ.

ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್‌ ಬೆಲೆ ಲೀಟರಿಗೆ 79.23 ರೂ. ಇದೆ.

Comments are closed.