ರಾಷ್ಟ್ರೀಯ

ಹಫೀಜ್ ಸಯೀದ್ ನಿಂದ ನಮ್ಮ ದೇಶದ ವಿರುದ್ಧದ ಯುದ್ಧಕ್ಕೆ ಯುವಕರ ನೇಮಕ!

Pinterest LinkedIn Tumblr


ಶ್ರೀನಗರ: 26/11 ದಾಳಿಯ ಕಿಂಗ್ ಪಿನ್ ಹಪೀಝ್ ಸಯೀದ್ ಮತ್ತೆ ಭಾರತದ ವಿರುದ್ಧ ದಾಳಿ ಮಾಡುವ ಸಂಚು ರೂಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾನೆ, ಎಂದು ಮಾರ್ಚ್‌ನಲ್ಲಿ ಬಂಧಿಸಲ್ಪಟ್ಟಿರುವ ಲಷ್ಟರ್ ಇ ತೈಬಾ ಉಗ್ರ ಹಮ್ಜಾ ಬಾಯ್ಬಿಟ್ಟಿದ್ದಾನೆ.

ಮಾರ್ಚ್ 20 ರಂದು ಕುಪ್ವಾರದಲ್ಲಿ ನಡೆಸಿದ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಝಬಿಉಲ್ಲಾ ಅಲಿಯಾಸ್ ಹಮ್ಜಾ ಸೆರೆ ಸಿಕ್ಕಿದ್ದ. ಆತನ ಜತೆಗಿದ್ದ ಇತರ ಐವರು ಸಹಚರರು ಕಾರ್ಯಾಚರಣೆಯಲ್ಲಿ ಹತರಾಗಿದ್ದರು. ಮೂವರು ಸೈನಿಕರು ಮತ್ತು ಒಬ್ಬ ಪೊಲೀಸ್ ಪೇದೆ ಸಹ ಈ ಸಂದರ್ಭದಲ್ಲಿ ಹುತಾತ್ಮರಾಗಿದ್ದರು.

ಹಫೀಜ್ ಸಯೀದ್ ಮತ್ತು ಜಕೀರ್-ಉರ್-ರೆಹಮಾನ್ ಲಖ್ವಿ ಸೇರಿಕೊಂಡು ತಮ್ಮ ವಿಶ್ವಾಸಿಕ ಜಮಾತ್-ಉದ್-ದಾವಾ (ಜ್ಯೂಡಿ) ಯ ನೇತೃತ್ವದಲ್ಲಿ ಯುವಕರನ್ನು ಸೆಳೆಯುವ ಕೆಲಸದಲ್ಲಿ ತೊಡಗಿದ್ದಾರೆ. ಇದೊಂದು ಬಹಿರಂಗ ಆಹ್ವಾನ. 15 ರಿಂದ 20 ವರ್ಷದ ಬಾಲಕರನ್ನು ಜಿಹಾದ್ ಸೇರಿ ಬಲಿದಾನ ಮಾಡಿ ಎಂದು ಸೆಳೆಯುವ ಜೆಯುಡಿ ನಾಯಕರು 7 ಪ್ರತ್ಯೇಕ ಸ್ಥಳಗಳಲ್ಲಿ ಅವರಿಗೆ ತರಬೇತಿ ನೀಡುತ್ತಾರೆ, ಎಂದು ಹಮ್ಜಾ ಬಹಿರಂಗ ಪಡಿಸಿದ್ದಾನೆ.

Comments are closed.