ಚಂಡೀಗಢ : 23ರ ಹರೆಯದ ಪಂಜಾಬಿ ಗಾಯಕ ನವಜ್ಯೋತ್ ಸಿಂಗ್ ಅವರನ್ನು ದುಷ್ಕರ್ಮಿಗಳು ಚಂಡೀಗಢ ಸಮೀಪದ ದೇರಾ ಬಸ್ಸಾ ಎಂಬಲ್ಲಿ ಗುಂಡಿಕ್ಕಿ ಕೊಂದಿದ್ದಾರೆ.
ನವಜ್ಯೋತ್ ಸಿಂಗ್ ಅವರ ದೇಹದ ಮೇಲೆ ನಾಲ್ಕರಿಂದ ಐದು ಗುಂಡೇಟುಗಳು ಕಂಡು ಬಂದಿವೆ. ಅವರ ಮೃತದೇಹ ಮೊಹಾಲಿಯ ದೇರಾ ಬಸ್ಸಾದ ರಾಮಪುರ ಸೈನಿಯಾನ್ ಗ್ರಾಮದಲ್ಲಿ, ಇಂದು ನಸುಕಿನ 1 ಗಂಟೆಯ ವೇಳೆ ಅವರ ಕಾರಿನಿಂದ ಸ್ವಲ್ಪ ದೂರ ಕಂಡು ಬಂದಿದೆ ಎಂದು ದೇರಾ ಬಸ್ಸಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹೀಂದರ್ ಸಿಂಗ್ ತಿಳಿಸಿದ್ದಾರೆ.
ನವಜ್ಯೋತ್ ಸಿಂಗ್ ಅವರ ಕುಟುಂಬ ಮೊಹಾಲಿಯಲ್ಲಿ ವಾಸವಾಗಿದೆ. ನಿನ್ನೆ ರಾತ್ರಿ ಅವರು ಮನೆಗೆ ಮರಳಿ ಬಾರದಿದ್ದಾಗ ಅವರ ಮನೆಯವರು ತೀವ್ರ ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಸಿಂಗ್ ಅವರ ಕೊಲೆ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.