ಮನೋರಂಜನೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ವೈದ್ಯರ ಜತೆ ಮಾತನಾಡಿದ್ದ ಆಡಿಯೋ ಬಹಿರಂಗ!

Pinterest LinkedIn Tumblr


ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಲಿತಾ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಸಂದರ್ಭ ವೈದ್ಯರ ಜತೆ ಮಾತನಾಡಿದ್ದ ಆಡಿಯೋವೊಂದು ಬಹಿರಂಗಗೊಂಡಿದೆ. 52 ಸೆಕೆಂಡ್‌ಗಳ ಆಡಿಯೋ ಕ್ಲಿಪ್‌ ಅನ್ನು ಜಯಲಲಿತಾ ಪ್ರಕರಣದ ವಿಚಾರಣೆ ನಡೆಸುತ್ತಿರುವ ಏಕವ್ಯಕ್ತಿ ಆಯೋಗದ ಮುಖ್ಯಸ್ಥ ನ್ಯಾ. ಎ. ಅರುಮುಗಸ್ವಾಮಿ ಶನಿವಾರ ಬಿಡುಗಡೆ ಮಾಡಿದ್ದಾರೆ.

ಆಡಿಯೋದಲ್ಲಿ ಜಯಲಲಿತಾ ವೈದ್ಯರೊಂದಿಗೆ ಮಾತನಾಡುತ್ತಿದ್ದು, ಆಹಾರದ ಪಥ್ಯ ಮತ್ತು ರಕ್ತದೊತ್ತಡದ ಕುರಿತು ಮಾತನಾಡಿದ್ದರು. ಇದನ್ನು ಆಯೋಗಕ್ಕೆ ವೈದ್ಯ ಪಿ. ಶಿವಕುಮಾರ್ ನೀಡಿದ್ದಾರೆ.

ಆಸ್ಪತ್ರೆಗೆ ದಾಖಲಾದ ಐದು ದಿನಗಳ ನಂತರ, ಸೆ. 27, 2016ರಂದು ರೆಕಾರ್ಡ್‌ ಆಗಿರುವ ಆಡಿಯೋ ಆಗಿದ್ದು, ಅದರಲ್ಲಿ 140/80 ಬಿಪಿ ಇದೆ, ಥಿಯೇಟರ್‌ನ ಮೊದಲ ಸೀಟಿನಲ್ಲಿ ಕುಳಿತ ಅನುಭವವಾಗುತ್ತಿದೆ, ಉಸಿರಾಡಲು ಕಷ್ಟವಾಗುತ್ತಿದೆ ಎಂದು ಜಯಲಲಿತಾ ಹೇಳಿಕೊಂಡಿದ್ದಾರೆ. ಈ ಹಿಂದೆ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ವಿಡಿಯೋ ಕ್ಲಿಪ್ ಬಹಿರಂಗವಾಗಿ ವಿವಾದಕ್ಕೆ ಕಾರಣವಾಗಿತ್ತು.

Comments are closed.