ರಾಷ್ಟ್ರೀಯ

ಈ ಬಾರಿಯ ಮನ್ ಕೀ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಏನು ಮಾತನಾಡಿದ್ದಾರೆ ನೋಡಿ…..

Pinterest LinkedIn Tumblr

ನವದೆಹಲಿ: 254 ದಿನಗಳಲ್ಲಿ 22 ಸಾವಿರ ಮೈಲು ದೂರು ಕ್ರಮಿಸಿ ಇಡೀ ಜಗತ್ತನೇ ಸುತ್ತಿದ್ದ ಭಾರತೀಯ ನೌಕಯಾನ -ಐಎನ್ ಎಸ್ ವಿಯ ಆರು ಮಂದಿ ತರುಣ ಮಹಿಳಾ ತಂಡವನ್ನು ಪ್ರಧಾನಿ ನರೇಂದ್ರಮೋದಿ ಅಭಿನಂದಿಸಿದ್ದಾರೆ.

ಆಕಾಶವಾಣಿಯ ಮನ್ ಕೀ ಬಾತ್ ಕಾರ್ಯಕ್ರಮದ 44 ನೇ ಆವೃತ್ತಿಯಲ್ಲಿಂದು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಮಕ್ಕಳಾದ ಈ ಆರು ಮಂದಿ 254 ದಿನಗಳಲ್ಲಿ ಇಡೀ ವಿಶ್ವ ಸುತ್ತುವ ಮೂಲಕ ನೌಕ ಕ್ಷೇತ್ರದಲ್ಲಿ ಪರಾಕ್ರಮ ಮೆರೆದಿದ್ದಾರೆ ಎಂದು ಪ್ರಶಂಸಿದ್ದಾರೆ.

ಜಗತ್ತಿನ ಪ್ರಮುಖ ಸಾಗರ ಸಮುದ್ರಗಳಲ್ಲಿ ಹಡುಗು ಮೂಲಕವೇ 22 ಸಾವಿರ ಮೈಲಿ ಕ್ರಮಿಸಿರುವುದು ಒಂದು ರೀತಿಯ ಸಾಧನೆಯಾಗಿದ್ದು, ಮೇ 21 ರಂದು ಭಾರತಕ್ಕೆ ವಾಪಾಸ್ಸಾದ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು.

ಆಸ್ಟ್ರೇಲಿಯಾದ ಪ್ರಿಮ್ಯಾಂಟಲ್, ನ್ಯೂಜಿಲ್ಯಾಂಡ್ ನ ಲೈಟೆಲ್ಟನ್, ಪೊಲ್ಕ್ ಲ್ಯಾಂಡ್ಸ್ ನ ಸ್ಟ್ಯಾನ್ಲಿ, ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಬಂದರುಗಳಲ್ಲಿ ನಿಲುಗಡೆಯೊಂದಿಗೆ 8 ತಿಂಗಳ ಕಾಲ ಯಶಸ್ವಿಯಾಗಿ ಜಗತ್ತು ಸುತ್ತಿ ಮೇ 21 ರಂದು ಗೋವಾದ ಪಣಜಿಗೆ ಈ ತಂಡ ಆಗಮಿಸಿತ್ತು.

ನೌಕಾ ಪಡೆ ಆಡ್ಮೀರಲ್ ಸುನೀಲ್ ಲಾಂಬಾ ಅವರೊಂದಿಗೆ ಎಲ್ಲಾ ಮಹಿಳಾ ಸಿಬ್ಬಂದಿಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ತಂಡವನ್ನು ಬರಮಾಡಿಕೊಂಡಿದ್ದರು.

ಲೆಪ್ಟಿನೆಂಟ್ ಕಮಾಂಡರ್ ವಾರ್ತಿಕಾ ಜೋಷಿ ನೇತೃತ್ವದ ತಂಡದಲ್ಲಿ, ಲೆಪ್ಟಿನೆಂಟ್ ಪಿ, ಸ್ವಾತಿ, ಪ್ರತಿಭಾ ಜಮ್ ವಾಲಾ, ವಿಜಯ್ ದೇವಿ, ಬಿ. ಐಶ್ವರ್ಯ , ಮತ್ತು ಸಬ್ ಲೆಪ್ಟಿನೆಂಟ್ ಪಾಯಲ್ ಗುಪ್ತಾ, ಇದ್ದಾರೆ.

Comments are closed.