ರಾಷ್ಟ್ರೀಯ

ಮೊದಲ ರಾತ್ರಿ ಪತ್ನಿಯನ್ನು ನೋಡಿ ಕಂಗಾಲಾಗಿ ನವವಿವಾಹಿತನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ!

Pinterest LinkedIn Tumblr


ಲಕ್ನೋ: ಮೊದಲ ರಾತ್ರಿಯಲ್ಲಿ ಪತ್ನಿಯನ್ನ ನೋಡಿದ ನಂತರ ಕಂಗಾಲಾಗಿ ನವವಿವಾಹಿತನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಮೇ 9 ರಂದು ಮೇನ್ಪುರಿಯಲ್ಲಿ ಕಿಷ್ಣಿಯ ಹರೇಂದ್ರ ಜಾತವ್, ಹಾರ್ಡೊಯಿ ಜಿಲ್ಲೆಯ 19 ವರ್ಷದ ಯುವತಿಯನ್ನು ಮದುವೆಯಾಗಿದ್ದನು. ಆದರೆ ಮದುವೆಯಾದ ಮೊದಲ ರಾತ್ರಿಯಂದು ಆಕೆ ಹುಡುಗಿ ಅಲ್ಲ ಮಂಗಳಮುಖಿ ಎಂದು ತಿಳಿದಿದೆ. ಇದರಿಂದ ವರ ಕಂಗಾಲಾಗಿ ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರಿದ್ದಾನೆ.

ಇವರಿಬ್ಬರ ಮದುವೆ ಅದ್ಧೂರಿಯಾಗಿ ಸುಮಾರು 12 ದಿನಗಳ ಕಾಲ ನಡೆದಿದೆ. ಆ ದಿನಗಳಲ್ಲಿ ಒಂದು ದಿನವೂ ವಧು ಮಂಗಳಮುಖಿ ಎಂದು ತಿಳಿದು ಬಂದಿಲ್ಲ. ಮೊದಲ ರಾತ್ರಿಯಂದು ಆಕೆ ಮಂಗಳಮುಖಿ ಎಂದು ತಿಳಿದಿದೆ. ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಈ ವೇಳೆ ವೈದ್ಯರ ವರದಿಯಲ್ಲಿ ಯುವಕನ ಅನುಮಾನ ದೃಢಪಟ್ಟಿದೆ. ಬಳಿಕ ಗ್ರಾಮದ ಹಿರಿಯರು ಆಕೆಯನ್ನು ಪೋಷಕರ ಮನೆಗೆ ಕಳುಹಿಸಿದ್ದಾರೆ.

ನಾನು ಮದುವೆಯಾಗುವುದಕ್ಕೆ ಮುಂಚಿತವಾಗಿ ಆಕೆಯನ್ನ ತುಂಬಾ ಪ್ರೀತಿಸುತ್ತಿದ್ದೆ. ನನಗೆ ನನ್ನ ಮೊದಲ ರಾತ್ರಿಯಂದು ಆಕೆ ಮಂಗಳಮುಖಿ ಎಂದು ತಿಳಿಯಿತು. ತಕ್ಷಣ ಕೆಲ ಸೆಕೆಂಡ್ ಗಾಬರಿಯಿಂದ ಕುಸಿದು ಬಿದ್ದೆ. ಮರುದಿನ ಬೆಳಗ್ಗೆ ಈ ವಿಷಯವನ್ನು ಪೋಷಕರಿಗೆ ತಿಳಿಸಿದೆ ಎಂದು ಜಾತವ್ ಹೇಳಿದ್ದಾರೆ.

ಈ ಘಟನೆ ಸಂಬಂಧ ಕಿಷ್ಣಿಯ ಪೊಲೀಸ್ ಠಾಣೆಗೆ ಹೋಗಿ, ಮದುವೆ ವೇಳೆ ನನಗೆ ಮೋಸವಾಗಿದೆ. ನ್ಯಾಯ ಕೊಡಿಸಿ ಎಂದು ನವವಿವಾಹಿತ ಮನವಿ ಮಾಡಿಕೊಂಡಿದ್ದಾನೆ. ಆದರೆ ಎರಡು ಕುಟುಂಬದವರು ಒಪ್ಪಿಗೆ ಮೇರೆಗೆ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಎಂದು ಕಾನ್ಸ್ ಟೇಬಲ್ ತಿಳಿಸಿದ್ದಾರೆ.

Comments are closed.