
ಡೆಹ್ರಾಡೂನ್: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಉತ್ತರಾಖಂಡ ಸಂಪುಟ ಇದೇ ಮೊದಲ ಬಾರಿಗೆ ಬುಧವಾರ ತೇಲುವಟ್‌ನಲ್ಲಿ ಸಂಪುಟ ಸಭೆ ನಡೆಸಿದೆ.
ತೇರಿ ಸರೋವರದಲ್ಲಿ ಸುಂದರ ತಾಣವಿದ್ದು, ಅಲ್ಲಿ ಸಂಪುಟ ಸಭೆಯನ್ನು ನಡೆಸಿದರೆ, ಅದರಿಂದ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಬಹುದು ಎನ್ನುವುದು ಸರಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಯೋಚನೆಯಾಗಿದೆ.
ತೇರಿ ಸರೋವರದಲ್ಲಿ ತೇಲುವ ರೆಸ್ಟೋರೆಂಟ್ ಮತ್ತು ಬೋಟ್ ಹೌಸ್‌ಗಳಿದ್ದು, ವಿವಿಧ ಸವಲತ್ತುಗಳನ್ನು ಪ್ರವಾಸಿಗರಿಗೆ ಒದಗಿಸಲಾಗುತ್ತದೆ. ಮೇ ತಿಂಗಳ ಕೊನೆಗೆ ತೇರಿ ಮಹೋತ್ಸವ ಕೂಡ ನಡೆಯಲಿದೆ. ಆ ಸಂದರ್ಭದಲ್ಲಿ ಹೆಚ್ಚು ಸಂಖ್ಯೆಯ ಜನರನ್ನು ಸೆಳೆಯಲು ಸಂಪುಟ ಸಭೆ ನೆರವಾಗಲಿದೆ.
Comments are closed.