ರಾಷ್ಟ್ರೀಯ

30 ವರ್ಷ ಹಿಂದಿನ ರಸ್ತೆ ಅಪಘಾತ ಪ್ರಕರಣದಲ್ಲಿ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ದೋಷಿ

Pinterest LinkedIn Tumblr


ನವದೆಹಲಿ: ಮೂವತ್ತು ವರ್ಷಗಳ ಹಿಂದಿನ ರಸ್ತೆ ಅಪಘಾತ ಪ್ರಕರಣದಲ್ಲಿ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌  ಸಿಧು ಅವರನ್ನು ದೋಷಿ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದೆ.

ಅವರಿಗೆ 1 ಸಾವಿರ ರೂ. ದಂಡ ವಿಧಿಸಿದೆ. ನ್ಯಾ.ಜೆ.ಚಲಮೇಶ್ವರ್‌ ಮತ್ತು ನ್ಯಾ.ಸಂಜಯ ಕಿಶನ್‌ ಕೌಲ್‌ ನೇತೃತ್ವದ ನ್ಯಾಯಪೀಠ ಇದೇ ಪ್ರಕರಣದಲ್ಲಿ ಸಿಧು ಅವರಿಗೆ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ನ್ಯಾಯಪೀಠ ನೀಡಿದ್ದ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ರದ್ದು ಮಾಡಿದೆ. ಇದರ ಜತೆಗೆ 1988ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧು ಅವರ ನಿಕಟವರ್ತಿ ರೂಪಿಂದರ್‌ ಸಿಂಗ್‌ ಸಂಧು ಎಂಬುವರನ್ನು ದೋಷಮುಕ್ತಿಗೊಳಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನವಜೋತ್‌ ಸಿಂಗ್‌ ಸಿಧು ಪ್ರತಿ ಸಂದರ್ಭದಲ್ಲಿಯೂ ತಾವು ಕಷ್ಟದಲ್ಲಿದ್ದಾಗ ನಂಬಿದ ದೇವರು ಕಾಪಾಡಿದ್ದಾರೆ. ಇದರ ಜತೆಗೆ ತಮಗೆ ಬೆಂಬಲ ನೀಡಿದವರಿಗೂ ಕೃತಜ್ಞತೆ ಸೂಚಿಸುವುದಾಗಿ ಹೇಳಿದ್ದಾರೆ. ಪಂಜಾಬ್‌ ಮುಖ್ಯಮಂತ್ರಿ ಕ್ಯಾ. ಅಮರಿಂದರ್‌ ಸಿಂಗ್‌ ಸುಪ್ರೀಂಕೋರ್ಟ್‌ ತೀರ್ಪನ್ನು ಸ್ವಾಗತಿಸಿದ್ದಾರೆ.

Comments are closed.