ರಾಷ್ಟ್ರೀಯ

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ !

Pinterest LinkedIn Tumblr

ನವದೆಹಲಿ : ಕರ್ನಾಟಕ ಚುನಾವಣೆ ಮುಗಿಯುತ್ತಿದ್ದಂತೆ ದೇಶಾದ್ಯಂತ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದೆ.

ಇಂದು ಬೆಳಗ್ಗೆ 6 ಗಂಟೆಯಿಂದ ಜಾರಿಯಾಗಿರುವಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 75 ರೂ. ಆಗಿದೆ. ಕೊಲ್ಕತ್ತಾದಲ್ಲಿ 77.79, ಮುಂಬೈಯಲ್ಲಿ 82. 94, ಮತ್ತು ಚೆನ್ನೈನಲ್ಲಿ 77. 93 ಪೈಸೆ ಆಗಿದ್ದು, ದೇಶಾದ್ಯಂತ ಗ್ರಾಹಕರ ಜೀಬಿಗೆ ಕತ್ತರಿ ಹಾಕಲಾಗಿದೆ.

ಈ ಮಧ್ಯೆ ನವದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 66. 57 ಪೈಸೆ, ಕೋಲ್ಕತ್ತಾದಲ್ಲಿ 69. 11, ಮುಂಬೈಯಲ್ಲಿ 70.88 ಮತ್ತು ಚೆನ್ನೈನಲ್ಲಿ 70.25 ಆಗಿದೆ. 19 ದಿನಗಳ ಹಿಂದೆಯಷ್ಟೇ ತೈಲ ಬೆಲೆಯಲ್ಲಿ ಹೆಚ್ಚಳವಾಗಿತ್ತು.

ಪೆಟ್ರೋಲಿಯಂ ಉತ್ಪನ್ನಗಳನ್ನು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಜಿಎಸ್ ಟಿ ಅಡಿ ಪರಿಗಣಿಸಬಹುದು ಎಂದು ಕೇಂದ್ರ ಪೆಟ್ರೋಲಿಯಿಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಕಳೆದ ತಿಂಗಳು ಹೇಳಿದ್ದರು.

Comments are closed.