ರಾಷ್ಟ್ರೀಯ

ಮಳೆಗೆ ಒಂದೇ ದಿನ 80 ಬಲಿ, 5 ರಾಜ್ಯಗಳಲ್ಲಿ ಭಾರೀ ಹಾನಿ

Pinterest LinkedIn Tumblr


ಹೊಸದಿಲ್ಲಿ: ಭಾನುವಾರದಿಂದೀಚೆಗೆ ಉತ್ತರ ಪ್ರದೇಶವೊಂದರಲ್ಲೇ ಆಲಿಕಲ್ಲು ಮಳೆ ಮತ್ತು ಸಿಡಿಲಿಗೆ 51 ಮಂದಿ ಬಲಿಯಾಗಿದ್ದು, ಐದು ರಾಜ್ಯಗಳಲ್ಲಿ ಒಟ್ಟು 80 ಮಂದಿ ಬಲಿಯಾಗಿದ್ದಾರೆ ಎಂದು ಗೃಹಸಚಿವಾಲಯ ತಿಳಿಸಿದೆ.

ಪಶ್ಚಿಮ ಬಂಗಾಳದಲ್ಲಿ 14, ಆಂಧ್ರ ಪ್ರದೇಶದಲ್ಲಿ 12, ದಿಲ್ಲಿಯಲ್ಲಿ 2 ಮತ್ತು ಉತ್ತರಾಖಂಡದದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಸಚಿವಾಲಯದ ವಕ್ತಾರ ತಿಳಿಸಿದರು.

ಸಿಡಿಲಿನ ಆಘಾತ ಹಾಗೂ ಆಲಿಕಲ್ಲು ಮಳೆಯ ಹೊಡೆತಕ್ಕೆ ಬಲಿಯಾದ 136 ಜನರ ಪೈಕಿ 123 ಮಂದಿ ಉತ್ತರಪ್ರದೇಶದವರು, 11 ಮಂದಿ ದಿಲ್ಲಿಯವರು ಮತ್ತು ಇಬ್ಬರು ಉತ್ತರಾಖಂಡವರು ಎಂದು ಸಚಿವಾಲಯ ಹೇಳಿದೆ.

ಧೂಳಿನ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ದಿಲ್ಲಿ ಮತ್ತು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಅನಾಹುತಗಳು ಉಂಟಾಗಿವೆ.

ಭಾರೀ ಬಿರುಗಾಳಿಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ನೂರಾರು ಮರಗಳು ನೆಲಕ್ಕುರುಳಿದ್ದು, ಉತ್ತರ ಭಾರತದ ಹಲವೆಡೆ ರಸ್ತೆ, ರೈಲು ಹಾಗೂ ವಿಮಾನ ಸಂಚಾರಗಳು ಅಸ್ತವ್ಯಸ್ತಗೊಂಡಿವೆ.

ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಹರ್ಯಾಣ, ಚಂಡೀಗಢ, ಮಧ್ಯಪ್ರದೇಶ, ಜಾರ್ಖಂಡ್‌, ಅಸ್ಸಾಂ, ಮೇಘಾಲಯ, ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಹಲವೆಡೆ ಭಾನುವಾರ ಆಲಿಕಲ್ಲು ಮಳೆಯಾಗಿದೆ ಎಂದು ಹವಾಮಾನ ಇಲಾಖೆ

Comments are closed.