ರಾಷ್ಟ್ರೀಯ

ಮಾಧ್ಯಮಗಳಿಗೆ ಜಾಹೀರಾತು ಮತ್ತು ಪ್ರಚಾರಕ್ಕಾಗಿ ಬರೋಬ್ಬರಿ 4,343 ಕೋಟಿ ರುಪಾಯಿಯನ್ನು ವ್ಯಯಿಸಿದ ಮೋದಿ ಸರ್ಕಾರ

Pinterest LinkedIn Tumblr

ಮುಂಬೈ: ವಿವಿಧ ಮಾಧ್ಯಮಗಳಿಗೆ ಜಾಹೀರಾತು ಮತ್ತು ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬರೋಬ್ಬರಿ 4,343 ಕೋಟಿ ರುಪಾಯಿಯನ್ನು ವ್ಯಯಿಸಿದೆ ಎಂಬ ಅಂಶ ಆರ್‌ಟಿಐನಿಂದ ಬಹಿರಂಗೊಂಡಿದೆ.

ಮುಂಬೈ ಮೂಲದ ಆರ್‌ಟಿಐ ಕಾರ್ಯಕರ್ತ ಅನಿಲ್ ಗಲ್ಗಲಿ ಅವರು ಕೇಂದ್ರದ ಬ್ಯೂರೋ ಆಫ್ ಔಟ್ರೀಚ್ ಅಂಡ್ ಕಮ್ಯುನಿಕೇಷನ್(ಬಿಒಸಿ)ಗೆ ಪ್ರಸ್ತುತ ಕೇಂದ್ರ ಸರ್ಕಾರ ಜಾಹೀರಾತು ಮತ್ತು ಪ್ರಚಾರಕ್ಕಾಗಿ ವ್ಯಯಿಸಿರುವ ಮೊತ್ತದ ಮಾಹಿತಿ ನೀಡುವಂತೆ ಆರ್‌ಟಿಐ ಸಲ್ಲಿಸಿದ್ದರು.

ಬಿಒಸಿಯ ಹಣಕಾಸು ಸಲಹೆಗಾರ ತಪನ್ ಸುತ್ರಾಧರ್ ಅವರು ಮಾಹಿತಿ ನೀಡಿದ್ದು 2014ರಿಂದ 2017ರವರೆಗೂ 4,300 ಕೋಟಿ ರುಪಾಯಿ ವ್ಯಯಿಸಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

2014ರ ಜೂನ್ ನಿಂದ 2015ರ ಮಾರ್ಚ್ ವರೆಗೂ ಕೇಂದ್ರ ಸರ್ಕಾರ ಪ್ರಿಂಟ್ ಗೆ 424 ಕೋಟಿ ರು. ಸಂವಹನ ಮಾಧ್ಯಮಕ್ಕೆ 448 ಕೋಟಿ ರು. ಹೊರಾಂಗಣ ಪ್ರಚಾರಕ್ಕೆ 79 ಕೋಟಿ ರುಪಾಯಿ ಖರ್ಚು ಮಾಡಿದ್ದು ಒಟ್ಟಾರೆ 953 ಕೋಟಿ ರುಪಾಯಿ ವ್ಯಯಿಸಿದೆ.

2015ರಿಂದ 2016ರವರೆಗೂ ಪ್ರಿಂಟ್ ಗೆ 510 ಕೋಟಿ ರು. ಸಂವಹನ ಮಾಧ್ಯಮಕ್ಕೆ 541 ಕೋಟಿ ರು. ಹೊರಾಂಗಣ ಪ್ರಚಾರಕ್ಕೆ 118 ಕೋಟಿ ರುಪಾಯಿ ಖರ್ಚು ಮಾಡಿದ್ದು ಒಟ್ಟಾರೆ 1,171 ಕೋಟಿ ರುಪಾಯಿ ವ್ಯಯಿಸಿದೆ.

2016ರಿಂದ 2016ರವರೆಗೂ ಪ್ರಿಂಟ್ ಗೆ 463 ಕೋಟಿ ರು. ಸಂವಹನ ಮಾಧ್ಯಮಕ್ಕೆ 613 ಕೋಟಿ ರು. ಹೊರಾಂಗಣ ಪ್ರಚಾರಕ್ಕೆ 185 ಕೋಟಿ ರುಪಾಯಿ ಖರ್ಚು ಮಾಡಿದ್ದು ಒಟ್ಟಾರೆ 1,263 ಕೋಟಿ ರುಪಾಯಿ ವ್ಯಯಿಸಿದೆ.

2017ರಿಂದ 2018ರವರೆಗೂ ಪ್ರಿಂಟ್ ಗೆ 955 ಕೋಟಿ ರು. ಸಂವಹನ ಮಾಧ್ಯಮಕ್ಕೆ 475 ಕೋಟಿ ರು. ಹೊರಾಂಗಣ ಪ್ರಚಾರಕ್ಕೆ 147 ಕೋಟಿ ರುಪಾಯಿ ಖರ್ಚು ಮಾಡಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

Comments are closed.