ರಾಷ್ಟ್ರೀಯ

ಬೀಳ್ಕೊಡುಗೆ ಸಮಾರಂಭದ ವೇಳೆ ಶಿಕ್ಷಕನಿಗೆ ಹಳೆಯ ವಿದ್ಯಾರ್ಥಿಗಳು ನೀಡಿದ ವಿಶೇಷ ಉಡುಗೊರೆ ನೋಡಿದ್ರೆ ಶಾಕ್ ಆಗುವುದು ಖಂಡಿತ !

Pinterest LinkedIn Tumblr

ನಾಗಪಟ್ಟಣಂ: ಈಗಿನ ಕಾಲದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ನೀಡುವ ಗೌರವ ಕಡಿಮೆ ಎಂದು ಹಲವರು ಆರೋಪಿಸುತ್ತಾರೆ. ಆದರೆ, ತಮಿಳುನಾಡಿನ ಸರಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಶಿಕ್ಷಕನಿಗೆ ಸ್ವಿಫ್ಟ್ ಕಾರನ್ನು ಉಡುಗೊರೆಯಾಗಿ ನೀಡಿರುವುದು ವಿಶೇಷ. ಶಿಕ್ಷಕನ ಬೀಳ್ಕೊಡುಗೆ ಸಮಾರಂಭದ ವೇಳೆ ವಿದ್ಯಾರ್ಥಿಗಳು 9 ಲಕ್ಷ ರೂ. ಮೌಲ್ಯದ ಕಾರನ್ನು ನೀಡಿರುವುದು ವಿಶೇಷ.

ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿರುವ ಅಯ್ಯಕರನ್ಪಾಳಯಂನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಇದೇ ಶಾಲೆಯಲ್ಲಿ 30 ವರ್ಷಕ್ಕೂ ಅಧಿಕ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಆನಂದ್ ರಾಜ್ ಹಲವು ವಿಷಯಗಳನ್ನು ಪಾಠ ಮಾಡುತ್ತಿದ್ದರು. ತರಗತಿಯಲ್ಲಿ ಪಾಠದ ನಡುವೆ ಜೋಕ್ಸ್‌ಗಳನ್ನು ಹೇಳುತ್ತಿದ್ದರು ಎಂಬ ಕಾರಣಕ್ಕೆ ಇವರು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು. ಇನ್ನು, ಅವರ ಬಳಿ ಪಾಠ ಕೇಳಿರುವ ಹಲವಾರು ವಿದ್ಯಾರ್ಥಿಗಳು ಈಗ ವೈದ್ಯರು, ಎಂಜಿನಿಯರ್‌ಗಳು ಹಾಗೂ ಐಎಎಸ್‌ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಕಾರಣಕ್ಕೆ ವಾಟ್ಸಾಪ್ ಗ್ರೂಪ್ ಹಾಗೂ ವಿದ್ಯಾರ್ಥಿಗಳ ಗುಂಪನ್ನು ರಚಿಸಿಕೊಂಡ ಹಳೆಯ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಹಣವನ್ನು ಸಂಗ್ರಹಿಸಿದ್ದಾರೆ. ಇದರಿಂದ ಲಕ್ಷಾಂತರ ಹಣವನ್ನು ಸಂಗ್ರಹಿಸಿದ ವಿದ್ಯಾರ್ಥಿಗಳು 9 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಡಿಸೈರ್ ಕಾರು, 40 ಗ್ರಾಂ ಚಿನ್ನದ ಸರವನ್ನು ಶಿಕ್ಷಕ ಆನಂದ್‌ರ ಬೀಳ್ಕೊಡುಗೆ ಸಮಾರಂಭದ ವೇಳೆ ಕೊಡುಗೆಯಾಗಿ ನೀಡಿದ್ದಾರೆ.

ತಮ್ಮ ನೆಚ್ಚಿನ ಶಿಕ್ಷಕನಿಗೆ ನೀಡಿರುವ ದುಬಾರಿ ಉಡುಗೊರೆ ಬಗ್ಗೆ ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿದ್ದು, ಅವರು ಬಹಳ ಒಳ್ಳೆ ವ್ಯಕ್ತಿಯಾಗಿದ್ದರು. ತಮಾಷೆಯ ಜತೆಗೆ ಎಲ್ಲ ವಿಷಯಗಳನ್ನು ಚೆನ್ನಾಗಿ ಕಲಿಸುತ್ತಿದ್ದರು. ಅವರಿಂದಾಗಿ ನಾವು ವೈದ್ಯರು, ಎಂಜಿನಿಯರ್‌ಗಳು, ಕಲೆಕ್ಟರ್‌ಗಳಾಗಿದ್ದೇವೆ ಎಂದು ಹಳೆಯ ವಿದ್ಯಾರ್ಥಿಗಳು ಹೇಳಿದ್ದಾರೆ.

Comments are closed.