ರಾಷ್ಟ್ರೀಯ

98ನೇ ವಯಸ್ಸಿನಲ್ಲಿ ಕೇರಳದ ಮೊದಲ ಸಿಸೇರಿಯನ್‌ ಮಗು ನಿಧನ

Pinterest LinkedIn Tumblr


ಕೇರಳದಲ್ಲಿ ಮೊತ್ತ ಮೊದಲ ಸಿಸೇರಿಯನ್‌ ಮಗುವಾಗಿದ್ದ ಮೈಕಲ್‌ ಸಾವರಿಮುತ್ತು ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1920ರಲ್ಲಿ ತಿರುವನಂತಪುರದ ಪಾಲಯಂನ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಇವರ ಜನನವಾಗಿತ್ತು.

ಮೈಕಲ್‌ ಹಾಗೂ ಮೇರಿ ದಂಪತಿಗೆ ಮೈಕಲ್‌ ಸಾವರಿಮುತ್ತು ನಾಲ್ಕನೇ ಮಗು. ಮೊದಲ ಮೂರು ಮಕ್ಕಳು ಹೆರಿಗೆಯಲ್ಲೇ ತೀರಿ ಹೋಗಿದ್ದರು. ಈ ಮಗು ಕೂಡ ಸಹಜ ಹೆರಿಗೆಯಾದರೆ ಬದುಕುವುದಿಲ್ಲ, ಸಿಸೇರಿಯನ್‌ ಮಾಡಿದರೆ ಬದುಕಬಹುದು ಎಂದು ವೈದ್ಯರು ಹೇಳಿದರು. ಮೊದಲಿಗೆ ದಂಪತಿ ಒಪ್ಪದಿದ್ದರೂ ಕೊನೆಗೆ ಒಪ್ಪಿಗೆ ನೀಡಿದರು. ಸಿಸೇರಿಯನ್‌ ಮೂಲಕ ಜಗತ್ತಿಗೆ ಬಂದ ಮಗುವನ್ನು ನೋಡಲು ಅಂದು ತುಂಬಾ ಜನರು ಮೈಕಲ್‌-ಮೇರಿ ಮನೆಗೆ ಭೇಟಿ ನೀಡಿದ್ದರು.

ಮೈಕಲ್‌ ಸಾವರಿಮುತ್ತು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು, ಕೇರಳ ಸರ್ಕಾರಿ ಮುದ್ರಣಾಲಯದ ಸದಸ್ಯರಾಗಿ ನಿವೃತ್ತಿ ಹೊಂದಿದ್ದರು.

Comments are closed.