ಅಹಮದಾಬಾದ್ : 2002 ರಲ್ಲಿ ಗುಜರಾತಿನಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣದ 14 ಮಂದಿ ಆರೋಪಿಗಳಿಗೆ ಗುಜರಾತ್ ಹೈಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು, ನಾಲ್ವರನ್ನು ನಿರ್ದೋಷಿಗಳೆಂದು ಘೋಷಿಸಿದೆ.
ಇದೇ ಪ್ರಕರಣದಲ್ಲಿ ಉಳಿದ ಏಳು ಮಂದಿಗೆ ಏಳು ವರ್ಷಗಳ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಈ ಪ್ರಕರಣ ಸಂಬಂಧ 23 ಮಂದಿಯನ್ನು ಆರೋಪಿಗಳೆಂದು ವಿಶೇಷ ವಿಚಾರಣಾ ನ್ಯಾಯಾಲಯ ಘೋಷಿಸಿತ್ತು,
ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಹರ್ಷ ದೇವಾನಿ ಮತ್ತು ಎ.ಎಸ್. ಸುಪೇಹಿಯಾ ಅವರನ್ನೊಳಗೊಂಡ ಪೀಠ, ಆದೇಶವನ್ನು ಕಾಯ್ದಿರಿಸಿತ್ತು.
2012ರಲ್ಲಿ ಎಸ್ ಐಟಿ ವಿಶೇಷ ನ್ಯಾಯಾಲಯ 32 ಮಂದಿಗೆ ಜೀವವಾಧಿ ಶಿಕ್ಷೆಯನ್ನು ಪ್ರಕಟಿಸಿತ್ತು. ಬಿಜೆಪಿಯ ಸಚಿವ ಮಾಯಾ ಕೊದನಾನಿ ಕೂಡಾ ಆರೋಪಿಯಾಗಿದ್ದು, 28 ವರ್ಷದ ಶಿಕ್ಷೆ ವಿಧಿಸಲಾಗಿತ್ತು. ಭಜರಂಗ ದಳದ ನಾಯಕ ಬಾಬು ಭಜರಂಗಿಗೆ ಸಾಯುವವರೆಗೂ ಜೈಲು ಶಿಕ್ಷೆ ಘೋಷಿಸಲಾಗಿತ್ತು.
ಇದನ್ನು ಹೊರತು ಪಡಿಸಿ ಏಳು ಮಂದಿ ಆರೋಪಿಗಳಿಗೆ 21 ವರ್ಷದ ಜೈಲು ಶಿಕ್ಷೆ , ಉಳಿದವರಿಗೆ 14 ವರ್ಷದ ಸಾಜಾ ಜೈಲು ಶಿಕ್ಷೆಯನ್ನು ನೀಡಲಾಗಿತ್ತು.ಎಲ್ಲಾ ಆರೋಪಿಗಳು ತಮ್ಮ ಅಪರಾಧದ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
2002 ಫೆಬ್ರವರಿ 27 ರಂದು ಗೋದ್ರಾ ರೈಲು ನಿಲ್ದಾಣದಲ್ಲಿ ಸಬರಮತಿ ಎಕ್ಸ್ ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದರಿಂದ 58 ಮಂದಿ ಜೀವ ಕಳೆದುಕೊಂಡಿದ್ದರು.
ಈ ಪ್ರಕರಣ ಖಂಡಿಸಿ ಫೆ. 28 ರಂದು ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗ ನೀಡಿದ್ದ ಗುಜರಾತ್ ಬಂದ್ ವೇಳೆ ನರೋಡಾ ಪಾಟೀಯಾದಲ್ಲಿ ಉದ್ರೀಕ್ತರು 97 ಮಂದಿ ಹತ್ಯೆ ಮಾಡಿದ್ದರು.
Comments are closed.