ರಾಷ್ಟ್ರೀಯ

ಉಗ್ರವಾದಕ್ಕಿಳಿದಿರುವ ಯುವಕರು ಮನೆಗಳಿಗೆ ಮರಳಿ: ಸೈನಿಕರಿಂದ ಕೊಲ್ಲಲ್ಪಡದೇ ಜೀವದಾನ ಪಡೆದ ಉಗ್ರ

Pinterest LinkedIn Tumblr


ಶ್ರೀನಗರ : ಬಾರಾಮುಲ್ಲಾದಲ್ಲಿ ಸೇನಾಪಡೆಗಳಿಂದ ಬಂಧನಕ್ಕೊಳಗಾದ ಲಷ್ಕರ್‌ -ಇ-ತೊಯ್ಬಾ ಉಗ್ರ ಐಜಾಜ್‌ ಗುಜ್ರಿಗೆ ಪಾಪ ಪ್ರಜ್ಞೆ ಕಾಡಿದ್ದು, ‘ಉಗ್ರವಾದಕ್ಕಿಳಿದಿರುವ ಇತರ ಯುವಕರು ಮನೆಗಳಿಗೆ ಮರಳಿ’ ಎಂದು ಮನವಿ ಮಾಡಿಕೊಂಡಿದ್ದಾನೆ.

ಸೈನಿಕರರ ಸಮಕ್ಷಮದಲ್ಲಿ ಚಿತ್ರೀಕರಿಸಲಾಗಿರುವ ವಿಡಿಯೋದಲ್ಲಿ ಉಗ್ರ ಗುಜ್ರಿಗೆ ಪಾಪ ಪ್ರಜ್ಞೆ ಕಾಡಿದ್ದು, ‘ಸೈನಿಕರು ನನ್ನನ್ನು ಕೊಂದು ಬಿಡಬಹುದಿತ್ತು ,ಆದರೆ ಅವರು ಹಾಗೆ ಮಾಡದೆ, ನನಗೆ ಜೀವದಾನ ನೀಡಿದರು.ಯಾರೆಲ್ಲಾ ತಪ್ಪು ದಾರಿಯಲ್ಲಿದ್ದೀರಿ, ಅವರೆಲ್ಲಾ ಶಸ್ತ್ರಗಳನ್ನು ಬಿಟ್ಟು ಮನೆಗಳಿಗೆ ಮರಳಿ ಕುಟುಂಬ ಸದಸ್ಯರೊಂದಿಗೆ ಸೇರಿಕೊಳ್ಳಿ’ ಎಂದು ಮನವಿ ಮಾಡಿದ್ದಾನೆ.

ಇನ್ನೋರ್ವ ಉಗ್ರ ನಾಸೀರ್‌ ಅಮಿನ್‌ ನನ್ನು ಉದ್ದೇಶಿಸಿ ಮಾತನಾಡಿದ ಗುಜ್ರಿ ‘ನಿನ್ನ ತಾಯಿ ತೀವ್ರ ಅನಾರೋಗ್ಯಕ್ಕೀಡಾಗಿದ್ದು ಮನೆಗೆ ಮರಳಿ ಅವರ ಆರೈಕೆ ಮಾಡು’ ಎಂದು ಕೇಳಿಕೊಂಡಿದ್ದಾನೆ.

‘ನಾವು ಪೊದೆಗಳಲ್ಲಿ ಅಡಗಿ ಸೈನಿಕರತ್ತ ಗುಂಡು ಹಾರಿಸಿದೆವು. ಆದರೆ ಅವರು ಪ್ರತಿದಾಳಿ ಮಾಡದೆ ನನ್ನನ್ನು ಬಂಧಿಸಿ ಜೀವ ಉಳಿಸಿದರು’ ಎಂದಿದ್ದಾನೆ.

ಎಪ್ರಿಲ್‌ 30 ರಂದು ಗುಜ್ರಿಯನ್ನು ಸೇನಾಪಡೆಗಳು ವಶಕ್ಕೆ ಪಡೆದಿದ್ದವು.

Comments are closed.