ರಾಷ್ಟ್ರೀಯ

ಪ್ರಧಾನಿ ಮೋದಿ ಹತ್ಯೆಗೆ ಇಸಿಸ್ ಸಂಚು

Pinterest LinkedIn Tumblr

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಉಗ್ರರು ಸ್ಕೆಚ್ ಹಾಕಿರುವುದು ಬಯಲಾಗಿದೆ.

ಪ್ರಧಾನಿ ಮೋದಿ ಅವರನ್ನು ಸ್ನೈಪರ್ ರೈಫಲ್ ನಲ್ಲಿ ಹತ್ಯೆ ಮಾಡೋಣ ಎಂದು ಶಂಕಿತ ಇಸಿಸ್ ಉಗ್ರ ಉಬೈದ್ ಮಿರ್ಜಾ ಸಂದೇಶ ರವಾನಿಸಿದ್ದು ಆನ್ ಲೈನ್ ಮೆಸೇಜಿಂಗ್ ಆ್ಯಪ್ ನಲ್ಲಿ ನಡೆದ ಮಾತುಕತೆಯ ವಿವರಗಳು ಗುಜರಾತ್ ಎಟಿಎಸ್ ಗೆ ಸಿಕ್ಕಿದ್ದು ಪ್ರಧಾನಿ ಮೋದಿಗೆ ಎದುರಾಗಿದ್ದ ಅಪಾಯದ ಬಗ್ಗೆ ಬಯಲಾಗಿದೆ.

ಉಬೈದ್ ಕಾಸಿಮ್ ಸ್ಟಿಂಬರ್ ವಾಲಾ ಎಂಬಾತನಿಗೆ ಸಂದೇಶ ನೀಡಿದ್ದಾನೆ. ಈ ಸಂಬಂಧ ಸೆಲ್ ಫೋನ್ ಹಾಗೂ ಪೆನ್ ಡ್ರೈವ್ ನಲ್ಲಿರುವ ದಾಖಲೆಗಳನ್ನು ಗುಜರಾತ್ ಎಟಿಎಸ್ ನವರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಗುಜರಾತ್ ಅಂಕಲೇಶ್ವರ್ ಕೋರ್ಟ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಗುಜರಾತ್ ಸೂರತ್ ನಿವಾಸಿಗಳಾಗಿರುವ ಉಬೈದ್ ಮಿರ್ಜಾ ಹಾಗೂ ಕಾಸಿಮ್ ಸ್ಟಿಂಬರ್ ವಾಲಾರನ್ನು 2017ರ ಅಕ್ಟೋಬರ್ 25ರಂದು ಗುಜರಾತ್ ಎಟಿಎಸ್ ಬಂಧಿಸಿತ್ತು.

ಗುಜರಾತ್ ಎಟಿಎಸ್ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಮೊದಲಿಗೆ ಪಿಸ್ತೂಲ್ ಕೊಂಡುಕೊಳ್ಳೊಣ. ನಂತರ, ಅವನ ಜತೆ ಸಂಪರ್ಕ ಸಾಧಿಸೋಣ ಎಂದು ಶಂಕಿತ ಇಸಿಸ್ ಸಂಚುಕೋರ ಮಿರ್ಜಾ 2016 ಸೆಪ್ಟೆಂಬರ್ 10ರ ರಾತ್ರಿ 11.24ಕ್ಕೆ ಸಂದೇಶ ಕಳಿಸಿದ್ದಾನೆ. ಅಲ್ಲದೆ ಫೆರಾರಿ ಎಂದು ಮೊಬೈಲ್ ಫೋನ್ ನಲ್ಲಿ ಹೆಸರಿಟ್ಟುಕೊಂಡಿದ್ದು ಹೌದು, ಮೋದಿಯನ್ನು ಸ್ನೈಪರ್ ರೈಫಲ್ ನಿಂದ ಹತ್ಯೆ ಮಾಡೋಣ ಎಂದು ಮಿರ್ಜಾ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದ್ದಾನೆ ಎಂಬುದು ಜಾರ್ಜ್ ಶೀಟ್ ನಲ್ಲಿ ಬಯಲಾಗಿದೆ.

Comments are closed.