ರಾಷ್ಟ್ರೀಯ

ವಿದ್ಯಾರ್ಥಿ ಪ್ರತಿಭಟನೆಗೂ ಮುಹಮ್ಮದ್‌ ಅಲಿ ಜಿನ್ನಾ ಭಾವಚಿತ್ರಕ್ಕೂ ಸಂಬಂಧವಿಲ್ಲ: ವೈಸ್‌ ಚಾನ್ಸಲರ್‌ ಪ್ರೊಫೆಸರ್‌ ತಾರಿಕ್‌ ಮನ್ಸೂರ್‌

Pinterest LinkedIn Tumblr


ಹೊಸದಿಲ್ಲಿ : ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ 1938ರಿಂದಲೂ ಆಜೀವ ಸ್ಥಾಪಕ ಸದಸ್ಯ ಮುಹಮ್ಮದ್‌ ಅಲಿ ಜಿನ್ನಾ ಅವರ ಭಾವ ಚಿತ್ರವಿದೆ. ವಿವಿ ಕ್ಯಾಂಪಸ್‌ನಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೂ ಜಿನ್ನಾ ಭಾವಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಎಎಂಯು ವೈಸ್‌ ಚಾನ್ಸಲರ್‌ ಪ್ರೊಫೆಸರ್‌ ತಾರಿಕ್‌ ಮನ್ಸೂರ್‌ ಹೇಳಿದ್ದಾರೆ.

“ಜಿನ್ನಾ ಭಾವ ಚಿತ್ರ ಆಲಿಗಢ ಮುಸ್ಲಿಂ ವಿವಿಯಲ್ಲಿ 1938ರಿಂದಲೂ ಇದೆ; ಇಲ್ಲಿ ಮಾತ್ರ ಅಲ್ಲ – ಜಿನ್ನಾ ಭಾವಚಿತ್ರ ಬಾಂಬೇ ಕೋರ್ಟ್‌ನಲ್ಲೂ ಸಾಬರಮತಿ ಆಶ್ರಮದಲ್ಲೂ ಇದೆ. ಆ ಬಗ್ಗೆ ಯಾರೂ ಆಕ್ಷೇಪ ಎತ್ತಿಲ್ಲ; ಆದುದರಿಂದ ಎಎಂಯುನಲ್ಲಿರುವ ಜಿನ್ನಾ ಭಾವಚಿತ್ರಕ್ಕೂ ವಿವಾದಕ್ಕೂ ಸಂಬಂಧವೇ ಇಲ್ಲ’ ಎಂದು ತಾರಿಕ್‌ ಹೇಳಿದರು.

ಆಲಿಗಢ ಮುಸ್ಲಿಂ ವಿವಿ ಆವರಣಕ್ಕೆ ಕಳೆದ ಮೇ 2ರಂದು ಕೆಲ ವ್ಯಕ್ತಿಗಳು ಪ್ರವೇಶಿಸಿ ಇಲ್ಲಿನ ಶಾಂತಿ ಕದಡಿದುದನ್ನು ಪ್ರತಿಭಟಿಸಿ ಆವರಣದೊಳಗೆ ವಿದ್ಯಾರ್ಥಿ ಪ್ರತಿಭಟನೆ ನಡೆಯುತ್ತಿದೆ ಎಂದು ವೈಸ್‌ ಚಾನ್ಸಲರ್‌ ಹೇಳಿದರು.

Comments are closed.