ರಾಷ್ಟ್ರೀಯ

ಮಾಜಿ ಸಿಎಂಗಳಿಗೆ ಸರಕಾರಿ ನಿವಾಸ ಬೇಡ ಎಂದ ಸುಪ್ರೀಂ

Pinterest LinkedIn Tumblr


ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಸರಕಾರಿ ಬಂಗಲೆಯನ್ನು ತೆರವುಗೊಳಿಸಬೇಕೆಂದು ಸುಪ್ರೀಂಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ.

ಈ ಆದೇಶದ ಅನ್ವಯ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ತಮಗೆ ನೀಡಲಾಗಿರುವ ನಿವಾಸವನ್ನು ಆದಷ್ಟು ಬೇಗ ಖಾಲಿ ಮಾಡಬೇಕಾಗುತ್ತದೆ. ಈ ಪಟ್ಟಿಯಲ್ಲಿ ಮುಲಾಯಂ ಸಿಂಗ್ ಯಾದವ್, ಗೃಹ ಸಚಿವ ರಾಜನಾಥ್ ಸಿಂಗ್, ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್, ನಾರಾಯಣ ದತ್ತ ತಿವಾರಿ, ಮಾಯಾವತಿ ಅವರಂಥ ಘಟಾನುಘಟಿಗಳ ಹೆಸರಿದೆ.

ತಮ್ಮ ಅಧಿಕಾರಾವಧಿ ಮುಗಿಸಿದ ಬಳಿಕವೂ ಮಾಜಿ ಮುಖ್ಯಮಂತ್ರಿಗಳಿಗೆ ಅಧಿಕೃತ ಸರಕಾರಿ ಬಂಗಲೆ ಕೊಡಬೇಕೆಂದು ಹಿಂದಿನ ಉತ್ತರ ಪ್ರದೇಶ ಸರ್ಕಾರ ನಿರ್ಣಯ ತೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಲೋಕ ಪ್ರಹರಿ ಎಂಬ ಸ್ವಯಂ ಸೇವಾ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಯಾವುದೇ ವ್ಯಕ್ತಿ ಮುಖ್ಯಮಂತ್ರಿ ಪದವಿ ಕಳೆದುಕೊಂಡ ಬಳಿಕ ಸಾಮಾನ್ಯ ಮನುಷ್ಯನೆಂದೇ ಪರಿಗಣಿಸಲ್ಪಡುತ್ತಾನೆ, ಜೀವನ ಪರ್ಯಂತ ಸರಕಾರಿ ವಸತಿ ಸೌಲಭ್ಯ ಪಡೆಯಲು ಆತ ಅರ್ಹನಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

Comments are closed.