ರಾಷ್ಟ್ರೀಯ

ದಂತೇವಾಡದಲ್ಲಿ ಕೋಳಿ ಮದುವೆ

Pinterest LinkedIn Tumblr


ಕತ್ತೆಗಳಿಗೆ ಮದುವೆ ಮಾಡುವುದನ್ನು ಕೇಳಿದ್ದೇವೆ. ಆದರೆ ಕೋಳಿಗಳಿಗೂ ಮದುವೆ ಮಾಡುವ ವಿಶೇಷ ಕಾರ್ಯಕ್ರಮವೊಂದು ಛತ್ತೀಸ್‌ಗಡದ ದಂತೇವಾಡದಲ್ಲಿ ನಡೆದಿದೆ. ಇಲ್ಲಿನ ವಿಶಿಷ್ಟ ಹಾಗೂ ಅಳಿವಿನಂಚಿನಲ್ಲಿರುವ ಕಡಕ್‌ನಾಥ್‌ ಕೋಳಿಗಳಿಗೆ ವಿವಾಹ ಮಾಡಲು ಜನರು
ನಿರ್ಧರಿಸಿದ್ದರು. ಈ ಕೋಳಿ ಸಂತತಿಯ ಬಗ್ಗೆ ಜಾಗೃತಿ ಮೂಡಿಸಲು ಈ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶನಿವಾರ ನಡೆದ ವಿವಾಹದಲ್ಲಿ ದಂತೇವಾಡದ ಹಿರಿಯ ಅಧಿಕಾರಿಗಳು ಆಗಮಿಸಿದ್ದರು. ಸುತ್ತಲಿನ ಪ್ರದೇಶಗಳ ನೂರಾರು ಜನರು ಈ ವಿಶಿಷ್ಟ ಕಪ್ಪು ಕೋಳಿಗಳ ವಿವಾಹದಲ್ಲಿ ಭಾಗಿಯಾಗಿದ್ದರು. ಈ ಕೋಳಿಗಳು ಅಧಿಕ ಪ್ರೊಟೀನ್‌ ಮತ್ತು ಕಡಿಮೆ ಕೊಲೆಸ್ಟರಾಲ್‌ ಹೊಂದಿವೆ ಹಾಗೂ ಇದರ ಮಾಂಸ ಕೂಡ ಅತ್ಯಂತ ರುಚಿಯಾಗಿರುವುದರಿಂದ ವಿಶೇಷ ಬೇಡಿಕೆ ಹೊಂದಿದೆ.

-Udayavani

Comments are closed.