ರಾಷ್ಟ್ರೀಯ

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ; ರಿಪಬ್ಲಿಕ್ ಟಿವಿ ಆರ್ನಬ್‌ ಗೋಸ್ವಾಮಿ ವಿರುದ್ಧ ಎಫ್ಐಆರ್

Pinterest LinkedIn Tumblr

ರಾಯಗಢ(ಮಹಾರಾಷ್ಟ್ರ): ಒಳಾಂಗಣ ಅಲಂಕಾರ ಕಲಾವಿದರೊಬ್ಬರಿಗೆ ಆತ್ಮಹತ್ಯೆಗೆ ಪ್ರೇರಣೆ ನಿಡಿದ್ದರೆನ್ನುವ ಆರೋಪದ ಮೇಲೆ ರಿಪಬ್ಲಿಕ್‌ ಟಿವಿ ಚಾನೆಲ್‌ನ ಪ್ರಧಾನ ಸಂಪಾದಕ ಹಾಗೂ ಆಡಳಿತ ನಿರ್ದೇಶಕ ಆರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮಹಾರಾಷ್ಟ್ರದ ರಾಯಗಢದಲ್ಲಿನ ಆಲಿಬಾಗ್‌ನ ಬಂಗಲೆಯಲ್ಲಿ ಶನಿವಾರ ಬೆಳಿಗ್ಗೆ ಒಳಾಂಗಣ ಅಲಂಕಾರ ಕಲಾವಿದರೊಬ್ಬ ಆತ್ಮಹತ್ಯೆಗೆ ಶರಣಗಿದ್ದರು. ಆಕೆಯ ಪತ್ನಿ ನಿಡಿದ್ದ ದೂರಿನ ಆಧಾರದಲ್ಲಿ ರಾಯಗಢ ಪೋಲೀಸರು ಆರ್ನಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಒಳಾಂಗಣ ಅಲಂಕಾರ ಕಲಾವಿದ ಅನ್ವಯ್‌ ನಾಯ್ಕ್‌ ಆತ್ಮಹತ್ಯೆಗೆ ಮುನ್ನ ಬರೆದ ಡೆತ್ ನೊಟ್ ನಲ್ಲಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಆರ್ನಬ್‌ ಗೋಸ್ವಾಮಿ, ಲೊಕಾಸ್ಟ್‌ಎಕ್ಸ್‌ನ ಫಿರೋಜ್‌ ಶೇಖ್‌ ಹಾಗು ಸ್ಮಾರ್ಟ್‌ ವರ್ಕ್ಸ್‌ನ ನಿತೇಶ್‌ ಸರ್ದಾ ಅವರ ಹೆಸರಿದೆ. “ನಾನುರಿಪಬ್ಲಿಕ್ ಟಿವಿ ಕಛೇರಿಯ ಒಳಾಂಗಣ ವಿನ್ಯಾಸ ನೆರವೇರಿಸಿದ್ದು ಅದಕ್ಕೆ ಇದುವರೆಗೆ ಹಣ ಪಾವತಿ ಆಗಿಲ್ಲ” ಎಂದು ಡೆತ್ ನೊಟ್ ನಲ್ಲಿ ಅವರು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿರುವ ರಿಪಬ್ಲಿಕ್ ಟಿವಿ ತನ್ನ ಮೇಲಿನ ಆರೋಪಗಳನ್ನು ಅಲ್ಲಗಳೆದಿದೆ. ಇಂಟೀರಿಯಲ್ ಡೆಕಾರೇಟರ್ ಗೆ ಗುತ್ತಿಗೆ ಆಧಾರದಲ್ಲಿ ಎಷ್ಟು ಹಣ ಪಾವತಿಸಬೇಕಾಗಿತ್ತೋ ಅಷ್ಟೂ ಹಣ ಪಾವತಿಯಾಗಿದೆ. ಸಂಸ್ಥೆ ಯಾವ ಬಾಕಿ ಉಳಿಸಿಕೊಂಡಿಲ್ಲ’ ಎಂದು ಸಂಸ್ಥೆ ಸ್ಪಷ್ಟನೆ ಕೊಟ್ಟಿದೆ.

Comments are closed.