ರಾಷ್ಟ್ರೀಯ

1 ತಿಂಗಳ ಕಾಲ ಡಿಎಸ್‌ಪಿಯಿಂದ ಮಹಿಳೆಗೆ ಕಿರುಕುಳ

Pinterest LinkedIn Tumblr


ಆಗ್ರಾ: ಉತ್ತರ ಪ್ರದೇಶದ ಕಾಸ್ಗಂಜ್‌ನ ಉಪ ಪೊಲೀಸ್‌ ಅಧೀಕ್ಷಕ ಅಜಯ್‌ ಕುಮಾರ್‌ ಸಿಂಗ್‌ ಅವರ ಮೇಲೆ ಮಹಿಳೆಯ ಮೇಲೆ ದೌರ್ಜನ್ಯ ಹಾಗೂ ಕಿರುಕುಳದ ಆರೋಪ ದಾಖಲಾಗಿದೆ.

2008ನೇ ಬ್ಯಾಚ್‌ನ ಪ್ರಾವಿನ್ಶಿಯಲ್‌ ಪೊಲೀಸ್‌ ಸರ್ವಿಸ್‌ (ಪಿಪಿಎಸ್‌)ವಿಭಾಗದ ಅಧಿಕಾರಿಯಾಗಿದ್ದ ಅಜಯ್‌ ಕುಮಾರ್‌ ಸಿಂಗ್‌, 2017ರಿಂದ ಡಿಯೋರಿಯಾ ಜಿಲ್ಲೆಯಲ್ಲಿ ಸರ್ಕಲ್‌ ಆಫೀಸರ್‌ ಆಗಿ ಸೇವೆಯಲ್ಲಿದ್ದರು. ಡಿಯೋರಿಯಾದಲ್ಲಿನ 28 ವರ್ಷದ ಮಹಿಳೆಗೆ ಕಳೆದ 1 ತಿಂಗಳಿನಿಂದ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿರುವುದಾಗಿ ದೂರು ದಾಖಲಾಗಿದೆ. ಈ ಸಂಬಂಧ ಅಜಯ್‌ ಕುಮಾರ್‌ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸರ್ಕಲ್‌ ಆಫೀಸರ್‌ ಸೇವೆಯಿಂದ ಲಖನೌನ ನೇಮಕಾತಿ ಮಂಡಳಿಗೆ ವರ್ಗಾವಣೆ ಮಾಡಿ, ಪೊಲೀಸ್‌ ಮಹಾನಿರ್ದೇಶಕ ಒ.ಪಿ. ಸಿಂಗ್‌ ಆದೇಶ ಹೊರಡಿಸಿದ್ದಾರೆ.

ವಾಟ್ಸ್‌ಆಪ್‌ನಿಂದ ಪ್ರಕರಣ ಬಯಲು
ದೈಹಿಕವಾಗಿ ಶೋಷಣೆಗೆ ಒಳಗಾದ ಮಹಿಳೆಯ ಫೋಟೋವು ಕಾಸ್ಗಂಜ್‌ ಪೊಲೀಸರ ವಾಟ್ಸ್‌ ಆಪ್‌ ಗ್ರೂಪ್‌ಗೆ ಬಂದಿದೆ. ಕೆಲ ದಿನಗಳ ಬಳಿಕ ಮಹಿಳೆಯು ತನಗೆ ಆಗಿರುವ ಶೋಷಣೆಗಳ ಕುರಿತು ವಿಡಿಯೋ ಚಿತ್ರೀಕರಣ ನಡೆಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ. ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

1 ತಿಂಗಳಿನಿಂದ ಕಿರುಕುಳ
ಕಳೆದ ೧ ತಿಂಗಳಿನಿಂದ ಮಹಿಳೆಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ ಅಜಯ್‌ ಕುಮಾರ್‌, ಆಕೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದು, ಹತ್ಯೆಗೂ ಯತ್ನಿಸಿರುವುದಾಗಿ ದೂರು ನೀಡಲಾಗಿದೆ. ಮಹಿಳೆಯು ಅಜಯ್‌ ಕುಮಾರ್‌ ಅವರನ್ನು 2017ರಲ್ಲಿ ಪ್ರಥಮ ಬಾರಿಗೆ ಭೇಟಿ ಮಾಡಿದ್ದಾಳೆ. ಡಿಯೋರಿಯಾ ಠಾಣೆಯಲ್ಲಿ ಮಹಿಳೆ ಬೇರೊಬ್ಬರ ವಿರುದ್ದ ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದರು. ಪ್ರಕರಣ ವಿಚಾರಣೆ ವೇಳೆ ಅಜಯ್‌ ಕುಮಾರ್‌ ಹಾಗೂ ಮಹಿಳೆ ಪರಸ್ಪರ ಸ್ನೇಹಿತರಾಗಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಲಾಗಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಇದೇ ವೇಳೆ ಮಹಿಳೆಯು ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿಯೂ ಮೂಲಗಳು ತಿಳಿಸಿವೆ.

Comments are closed.