ರಾಷ್ಟ್ರೀಯ

ಕಡಿಮೆ ಬೆಲೆಯ ಪೆಟ್ರೋಲಿಯಂ ಪೂರೈಕೆ ಜಾಲ ಬಯಲು: ಇಬ್ಬರ ಸೆರೆ

Pinterest LinkedIn Tumblr


ಕೋಲ್ಕತ : ಪಶ್ಚಿಮ ಬಂಗಾಲದ ಆಲಿಪುರ್‌ದೋರ್‌ ಜಿಲ್ಲೆಯ ಬೀರ್‌ಪಾರಾ ಎಂಬಲ್ಲಿ ಕಡಿಮೆ ಬೆಲೆಯ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಜಾಲವೊಂದನ್ನು ಭೇದಿಸಿರುವ ಪಶ್ಚಿಮ ಬಂಗಾಲ ಸಿಐಡಿ, ಇಬ್ಬರನ್ನು ಬಂಧಿಸಿರುವುದಾಗಿ ಸಿಐಡಿ ದಳದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಖಚಿತ ಮಾಹಿತಿ ಪಡೆದು ಬೀರ್‌ಪಾರಾ ಪೆಟ್ರೋಲ್‌ ಪಂಪ್‌ಗೆ ದಾಳಿ ನಡೆಸಿದ ಸಿಐಡಿ ಅಧಿಕಾರಿಗಳು ಅಲ್ಲಿ ಕಲಬೆರಕೆಯ ಕೈಗಾರಿಕಾ ದ್ರಾವಣವನ್ನು ಭೂಗತ ಸಂಗ್ರಹಾಗಾರಕ್ಕೆ ಇಳಿಸಲಾಗುತ್ತಿದ್ದುದನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದರು.

ಪೆಟ್ರೋಲ್‌ ಪಂಪ್‌ನ ಅಂಡರ್‌ಗ್ರೌಂಡ್‌ ಟ್ಯಾಂಕ್‌ಗೆ ಇಳಿಸಲಾಗುತ್ತಿದ್ದ ಕಲಬೆರಕೆ ಉದ್ದೇಶದ ಸುಮಾರು 7,000 ಲೀಟರ್‌ ಕೈಗಾರಿಕಾ ದ್ರಾವಣವನ್ನು ಅಧಿಕಾರಿಗಳು ವಶಪಡಿಸಿಕೊಂಡರು.

-Udayavani

Comments are closed.