ರಾಷ್ಟ್ರೀಯ

ಉ.ಪ್ರ.ದಲ್ಲಿ ನಿಲ್ಲದ ಅತ್ಯಾಚಾರ: 14ರ ಬಾಲೆಯ ಮೇಲೆ ಗ್ಯಾಂಗ್‌ ರೇಪ್‌

Pinterest LinkedIn Tumblr


ಆಲಿಗಢ, ಉತ್ತರ ಪ್ರದೇಶ : ಹತ್ರಾಸ್‌ ಜಿಲ್ಲೆಯ ಸಿಕಂದ್ರಾ ರಾವ್‌ ಪಟ್ಟಣದ ಹೊರವಲಯದಲ್ಲಿ 14ರ ಹರೆಯದ ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯು ಕಳೆದ ಭಾನುವಾರ ತನ್ನ ಮನೆಗೆ ತಾಗಿಕೊಂಡಿರುವ ಹೊಲಕ್ಕೆ ಹೋಗಿದ್ದಾಗ ಅಲ್ಲಿ ಕಾಮಾಂಧರು ಆಕೆಯ ಮೇಲೆ ಮುಗಿಬಿದ್ದು ಅತ್ಯಾಚಾರ ನಡೆಸಿದರು ಎಂದು ಸಿಕಂದ್ರಾ ರಾವ್‌ ಪಟ್ಟಣದ ಎಸ್‌ಎಚ್‌ಓ ಮನೋಜ್‌ ಶರ್ಮಾ ತಿಳಿಸಿದ್ದಾರೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ; ಆಕೆಯ ತಂದೆ ಕೊಟ್ಟಿರುವ ದೂರಿನ ಪ್ರಕಾರ ಇಬ್ಬರು ಆರೋಪಿಗಳನ್ನು ಎಫ್ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು ಶರ್ಮಾ ಹೇಳಿದರು.

-ಉದಯವಾಣಿ

Comments are closed.