ರಾಷ್ಟ್ರೀಯ

ಒಡಿಶಾದಲ್ಲಿ ಎಕ್ಸ್ ಪ್ರೆಸ್ ರೈಲು ಹರಿದು ನಾಲ್ಕು ಆನೆಗಳ ಸಾವು

Pinterest LinkedIn Tumblr

ಜಾರ್ಸುಗುಡ(ಒಡಿಶಾ): ಒಡಿಶಾದ ಜಾರ್ಸುಗುಡ ಜಿಲ್ಲೆಯ ಬಗ್ಧಿಹಿ ರೈಲ್ವೆ ನಿಲ್ದಾಣದ ಸಮೀಪ ಎಕ್ಸ್ ಪ್ರೆಸ್ ರೈಲು ಹರಿದು ಕನಿಷ್ಟ ನಾಲ್ಕು ಆನೆಗಳು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

ಇಂದು ಬೆಳಗಿನ ಜಾವ ಅಲ್ಲೆಪ್ಪೆಯ್ – ಬೊಕರೊ ಎಕ್ಸ್ ಪ್ರೆಸ್ ರೈಲು ಹಳಿ ದಾಟುತ್ತಿದ್ದ ನಾಲ್ಕು ಆನೆಗಳ ಮೇಲೆ ಹರಿದಿದೆ.

ರೈಲ್ವೆ ಹಳಿ ಮೇಲೆ ಆನೆಗಳು ಸತ್ತು ಬಿದ್ದಿರುವುದನ್ನು ನೋಡಿದ ಸ್ಥಳೀಯರು ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ತಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಮೃತ ಆನೆಗಳನ್ನು ಹಳಿಯಿಂದ ತೆರವುಗೊಳಿಸಿದ್ದಾರೆ.

ಇದು ಆನೆಗಳು ಓಡಾಡುವ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ರೈಲು ಕನಿಷ್ಠ ವೇಗದಲ್ಲಿ ಚಲಿಸಬೇಕು ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೂ ಯಾವ ಪರಿಸ್ಥಿತಿಯಲ್ಲಿ ಅಪಘಾತ ನಡೆದಿದೆ ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತೇವೆ ಎಂದು ಸಹಾಯಕ ಅರಣ್ಯ ಅಧಿಕಾರಿ ಪ್ರದೀಪ್ ಕುಮಾರ್ ಧಾಲ್ ಅವರು ತಿಳಿಸಿದ್ದಾರೆ.

Comments are closed.