ರಾಷ್ಟ್ರೀಯ

ತಮ್ಮ ಮಗಳನ್ನು ಅತ್ಯಾಚಾರ ಮಾಡಿದ ಕಾಮುಕರನ್ನು ಗಲ್ಲಿಗೇರಿಸಿ; ಕತುವಾದಲ್ಲಿ ಹತ್ಯೆಗೀಡಾದ ಬಾಲಕಿಯ ದುಃಖತಪ್ತ ಪೋಷಕರಿಂದ ಒತ್ತಾಯ

Pinterest LinkedIn Tumblr

ಉಧಂಪುರ: ನನ್ನ ಮಗಳನ್ನು ಅತ್ಯಾಚಾರ ಮಾಡಿ, ಕ್ರೂರವಾಗಿ ಹತ್ಯೆಗೈದ ಕಾಮುಕರನ್ನು ಗಲ್ಲಿಗೇರಿಸಿ, ಬಾಲಾಪರಾಧಿಯನ್ನು ಬಿಡಬೇಡಿ, ಪ್ರಕರಣದಿಂದ ಸಿಬಿಐಯನ್ನು ದೂರವಿಡಿ… ಇದು ದುಃಖತಪ್ತ ಪೋಷಕರ ಆಕ್ರೋಶಭರಿತ ಮಾತು.

ಕಾಮುಕರ ಕಪಿಮುಷ್ಟಿಯಲ್ಲಿ ಸಿಲುಕಿದ್ದ 8 ವರ್ಷದ ಮುಗ್ಧ ಬಾಲಕಿಯ ಧಾರುಣವಾಗಿ ಹತ್ಯೆಗೀಡಾಗಿದ್ದಳು. ಈ ಪ್ರಕರಣದ ವಿರುದ್ಧ ಇಂದು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ಪೋಷಕರು ಕಾಮುಕರ ವಿರುದ್ಧ ದನಿಯೆತ್ತಿದ್ದು, ಪುತ್ರಿಯನ್ನು ಅತ್ಯಾಚಾರಗೈದು, ಕ್ರೂರವಾಗಿ ಹತ್ಯೆ ಮಾಡಿದ್ದ 8 ಮಂದಿ ಕಾಮುಕರನ್ನೂ ಗಲ್ಲಿಗೇರಿಸಿ, ಬಾಲಾಪರಾಧಿಯನ್ನು ಬಿಡಬೇಡಿ ಎಂದು ಆಗ್ರಹಿಸುತ್ತಿದ್ದಾರೆ.

ಮುಗ್ದ ಬಾಲಕಿಗೆ ನ್ಯಾಯ ದೊರಕಬೇಕು. ಕಾಮುಕರನ್ನು ಗಲ್ಲಿಗೇರಿಸಬೇಕು. ಕಾಮುಕರು ಮಾನವೀಯತೆಯಿಲ್ಲ, ಅವರಿಗೆ ಬದುಕುವ ಯಾವುದೇ ಅರ್ಹತೆಗಳಿಲ್ಲ. ನನ್ನ ಮಗಳು ಕೇವಲ 8 ವರ್ಷದವಳಾಗಿದ್ದಳು. ಆಕೆಗೆ ಸಾಕಷ್ಟು ಹಿಂಸೆ ನೀಡಿದ್ದಾರೆ. ದೇಹದ ಎಲ್ಲೆಡೆ ಸುಟ್ಟ ಗಾಯಗಳಿದ್ದವು. ಆಕೆಗೆ ಎಲೆಕ್ಟ್ರಿಕ್ ಶಾಕ್ ಕೂಡ ನೀಡಿದ್ದಾರೆ.

ಮಗಳ ಕಾಲುಗಳು ಹಾಗೂ ಕೆಲ ಅಂಗಾಂಗಳು ಹಾನಿಯಾಗಿದ್ದವು. ಮುಖದ ಮೇಲೂ ಸುಟ್ಟ ಗಾಯಗಳಿದ್ದವು. ಮುಖದ ಕೆನ್ನೆಗಳ ಮೇಲೆ ಕಣ್ಣೀರು ಹಾಕಿರುವ ಗುರುತುಗಳಿದ್ದವು ಎಂದು ಸಂತ್ರಸ್ತರ ಬಾಲಕಿಯ ತಾಯಿ ದುಃಖದಿಂದ ಮಗಳಿದ್ದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಆಕೆಗೆ ಸಾಯುವ ವಯಸ್ಸಲ್ಲ. ಜ.10 ರಂದು ಹೊರಗೆ ಹೋಗಿದ್ದ ಮಗಳು ಮತ್ತೆ ಹಿಂದಿರುಗಿ ಮನೆಗೆ ಬರಲೇ ಇಲ್ಲ. ನಾಪತ್ತೆಯಾಗಿದ್ದ ಮಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದೆವು. ವಾರಗಳ ಬಳಿಕ ಆಕೆಯ ಮೃತದೇಹ ಪತ್ತೆಯಾಗಿತ್ತು ಎಂದು ತಿಳಿಸಿದ್ದಾರೆ.

ದೇಗುಲದ ಅರ್ಚಕನಾಗಿರುವ ಸಂಜಿ ರಾಮ್ ಪ್ರಕರಣದ ಪ್ರಮುಖ ಆರೋಪಿಯೆಂದು ಹೇಳಲಾಗುತ್ತಿದೆ. ಸಂಜಿ ರಾಮ್ ಸಂಬಂಧಿಯಾಗಿದ್ದ ವ್ಯಕ್ತಿ ಬಾಲಿಕಿಯನ್ನು ಅಪಹರಣ ಮಾಡಿದ್ದ. ಆತ ಬಾಲಾಪರಾಧಿಯಾಗಿದ್ದಾನೆ.

ಕುದುರೆಗಳನ್ನು ಕರೆದುಕೊಂಡು ಹೋಗಿದ್ದ ಆಸೀಫಾ ಕೂದಲಿಗೆ ಹಾಕಿದ್ದ ರಿಬ್ಬನ್’ನ್ನು ಕಳೆದುಕೊಂಡಿದ್ದಳು. ಸ್ಥಳಕ್ಕೆ ಹೋಗಿದ್ದ ಅರ್ಚಕನ ಸಂಬಂಧಿ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ರಿಬ್ಬನ್’ನ್ನು ನೋಡಿದ್ದೆ ಎಂದು ಹೇಳಿ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಬಳಿಕ ಆಕೆಯನ್ನು ದೇಗುಲದಲ್ಲಿ ಬಚ್ಚಿಟ್ಟಿದ್ದಾರೆ. ನಂತರ ಈ ಧಾರುಣ ಘಟನೆ ಸಂಭವಿಸಿದೆ ಎಂದು ಆಸೀಫಾಳ ತಾಯಿ ಹೇಳಿಕೊಂಡಿದ್ದಾರೆ.

Comments are closed.